×
Ad

ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಝಿನ್ಹೊ ಫಲೆರೊ ಅವರನ್ನು ರಾಜ್ಯಸಭೆಗೆ ಹೆಸರಿಸಿದ ಟಿಎಂಸಿ

Update: 2021-11-13 15:02 IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ತೃಣಮೂಲ ಕಾಂಗ್ರೆಸ್ ತನ್ನ ಉಪಾಧ್ಯಕ್ಷ ಲುಯಿಝಿನ್ಹೊ ಫಲೆರೊ ಅವರನ್ನು ಶನಿವಾರ ಅಭ್ಯರ್ಥಿಯನ್ನಾಗಿ ಹೆಸರಿಸಿದೆ.

ಗೋವಾದ ಮಾಜಿ ಮುಖ್ಯಮಂತ್ರಿ ಫಲೆರೊ ಅವರು ಕಾಂಗ್ರೆಸ್ ತೊರೆದು ಸೆಪ್ಟೆಂಬರ್‌ನಲ್ಲಿ ಟಿಎಂಸಿ ಸೇರಿದ್ದರು.

"ನಮಗೆ ಲುಯಿಝಿನ್ಹೊ ಫಲೆರೊ ಅವರನ್ನು ಸಂಸತ್ತಿನ ಮೇಲ್ಮನೆಗೆ ನಾಮನಿರ್ದೇಶನ ಮಾಡಲು ತುಂಬಾ ಸಂತೋಷವಾಗಿದೆ. ರಾಷ್ಟ್ರದ ಸೇವೆಗಾಗಿ ಅವರ ಪ್ರಯತ್ನಗಳನ್ನು ನಮ್ಮ ಜನರು ವ್ಯಾಪಕವಾಗಿ ಮೆಚ್ಚುತ್ತಾರೆ ಎಂಬ ವಿಶ್ವಾಸ ನಮಗಿದೆ" ಎಂದು ಟಿಎಂಸಿ ಟ್ವಿಟರ್‌ನಲ್ಲಿ ತಿಳಿಸಿದೆ.

ರಾಜ್ಯಸಭಾ ಉಪಚುನಾವಣೆ ನವೆಂಬರ್ 29 ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News