ಮಂಗಳೂರು: ಫಾದರ್ ಮುಲ್ಲರ್ ನರ್ಸಿಂಗ್ ಶಾಲಾ-ಕಾಲೇಜು ವಿವಿಧ ಕೋರ್ಸ್‌ಗಳ ಉದ್ಘಾಟನೆ

Update: 2021-11-13 12:06 GMT

ಮಂಗಳೂರು, ನ.13: ಫಾದರ್ ಮುಲ್ಲರ್ ನರ್ಸಿಂಗ್ ಸ್ಕೂಲ್ ಮತ್ತು ಕಾಲೇಜಿನ ವಿವಿಧ ಕೋರ್ಸ್‌ಗಳ ಉದ್ಘಾಟನಾ ಸಮಾರಂಭ ಇಂದು ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು.

ಜಿಎನ್‌ಎಂನ 64ನೆ ಬ್ಯಾಚ್, ಬಿಎಸ್ಸಿ (ಎನ್)ಯ 35ನೆ ಬ್ಯಾಚ್, ಪಿಬಿಬಿಎಸ್‌ಸಿನ 34ನೆ ಬ್ಯಾಚ್, ಎಂಎಸ್ಸಿ (ಎನ್) 30ನೆ ಬ್ಯಾಚ್‌ನ ಉದ್ಘಾಟನೆಯನ್ನು ಱಾಜಕ ಮುಲ್ಲರ್ ಮೆಡಿಕಲ್ ಕಾಲೇಜಿನ ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥೆ ಡಾ. ಪದ್ಮಜಾ ಉದಯಕುಮಾರ್ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ದಾದಿಯರು ರೋಗಿಗಳಿಗಾಗಿ ತಮ್ಮ ಜೀವನನ್ನೇ ಮುಡಿಪಾಗಿಡುತ್ತಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭ ಅದು ಸಾಬೀತುಗೊಂಡಿದೆ. ಪ್ರಾಮಾಣಿಕತೆ, ಸಮಗ್ರತೆ, ಸಮರ್ಪಣೆ, ನಮ್ರತೆ ಮತ್ತು ಸ್ಥೈರ್ಯವು ದಾದಿಯರ ಪ್ರಮುಖ ಗುಣಲಕ್ಷಣಗಳು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಶನ್‌ನ ನಿರ್ದೇಶಕರಾದ ರೆ.ಫಾ. ರಿಚ್ಚರ್ಡ್ ಅಲೋಶಿಯಸ್ ಕುವೆಲ್ಲೋ ಅಧ್ಯಕ್ಷತೆ ವಹಿಸಿದ್ದರು.

ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ಪ್ರಮುಖರಾದ ಫಾ. ಅಜಿತ್ ಮೆನೆಜಸ್, ಫಾ. ರುಡಾಲ್ಫ್ ರವಿ ಡೆಸಾ, ಡಾ. ಜೆ.ಪಿ. ಆಳ್ವ, ಡಾ. ಆ್ಯಂಟನಿ ಸೆಲ್ವನ್, ಸಿ. ಜೆನೆಟ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಸಿ. ಜೆಸಿಂತಾ ಡಿಸೋಜಾ ಸ್ವಾಗತಿಸಿದರು. ನರ್ಸಿಂಗ್ ಸ್ಕೂಲ್‌ನ ಪ್ರಾಂಶುಪಾಲೆ ಸಿ. ನ್ಯಾನ್ಸಿ ಪ್ರಿಯಾ ಮತಾಯಸ್ ವಂದಿಸಿದರು. ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ರಿಯಾನಾ ಮತ್ತು ಶಿರ್ಲೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News