×
Ad

ಕುಂದಾಪುರದಲ್ಲಿ ಗಿರಿಜಾ ಹೆಲ್ತ್‌ ಕೇರ್- ಸರ್ಜಿಕಲ್ಸ್ ಶುಭಾರಂಭ

Update: 2021-11-14 20:36 IST

ಕುಂದಾಪುರ, ನ.14: ಉಡುಪಿಯ ಗಿರಿಜಾ ಗ್ರೂಪ್ಸ್ ಆಫ್ ಕನ್ಸರ್ನ್ ವತಿ ಯಿಂದ ಗಿರಿಜಾ ಹೆಲ್ತ್‌ ಕೇರ್ ಹಾಗೂ ಸರ್ಜಿಕಲ್ಸ್ ಮೂರನೇ ಶೋರೂಮ್ ಮತ್ತು ಮೆಡಿಕೇರ್ ಪೊಲಿಕ್ಲಿನಿಕ್ ರವಿವಾರ ಕುಂದಾಪುರ ಮುಖ್ಯರಸ್ತೆಯ ಪಾರಿ ಜಾತ ಹೊಟೇಲಿನ ಎದುರು ಅಥರ್ವ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ಹೆಲ್ತ್‌ ಕೇರ್‌ನ್ನು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿ ಶುಭಹಾರೈಸಿದರು. ಜಿಲ್ಲಾ ಕೆಮಿಸ್ಟ್ ಡ್ರಗಿಸ್ಟ್ ಅಸೋಸಿಯೇಷನ್ ಉಪಾಧ್ಯಕ್ಷ ಸದಾಶಿವ ರಾವ್ ಮೆಡಿಕಲ್ ಪಾಲಿಕ್ಲಿನಿಕ್ನ್ನು ಹಾಗೂ ಸಭಾ ಕಾರ್ಯಕ್ರಮವನ್ನು ಉಡುಪಿಯ ಮನೋತಜ್ಞ ಡಾ.ಪಿ.ಬಿ. ಭಂಡಾರಿ ಉದ್ಘಾಟಿಸಿದರು.

ಗಿರಿಜಾ ಗ್ರೂಪ್ ಪಾಲುದಾರ ರವೀಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 15 ವರ್ಷಗಳಿಂದ ಗಿರಿಜಾ ಎಂಟರ್ಪ್ರೈಸಸ್ ಎಂಬ ಹೋಲ್ಸೇಲ್ ಡಿಸ್ಟ್ರಿಬ್ಯೂಷನ್ ಮಾಡುತ್ತಿದ್ದು, ನಂತರ 2 ವರ್ಷಗಳಿಂದ ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ತೆರೆಯಲಾಗಿದೆ. ಇದರಲ್ಲಿ ಮೆಡಿಷನ್ ಮತ್ತು ಸರ್ಜಿಕಲ್ಸ್ ಎರಡನ್ನು ಹೋಲ್ಸೇಲ್ ಆಗಿ ನೀಡುವಂತಹದನ್ನು ಮಾಡಿದ್ದೇವೆ. ಈಗಾಗಲೇ ಉಡುಪಿ ಹಾಗೂ ಮಂಗಳೂರಿನಲ್ಲಿ ಶಾಖೆಗಳನ್ನು ತೆರೆಯಲಾಗಿದ್ದು, ಇದು ಮೂರನೇ ಶಾಖೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೋಸೈಟಿ ಚೇರ್ಮನ್ ಜಯಕರ್ ಶೆಟ್ಟಿ, ಕಟ್ಟಡ ಮಾಲಕ ಗಣೇಶ್ ನಾಯಕ್, ಕುಂದಾಪುರ ಸಿಟಿ ಜೆಸಿಯ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಕುಂದಾಪುರ ಕುಂದಗನ್ನಡ ರಾಯ ಭಾರಿ ಮನು ಹಂದಾಡಿ ಉಪಸ್ಥಿತರಿದ್ದರು. ಸಂದೇಶ್ಸಲ್ವಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News