ಮಲ್ಪೆ ಫವರ್ಸ್‌ ಆಫ್ ಪ್ಯಾರಡೈಸ್ ನಲ್ಲಿ ದೀಪಾವಳಿ ಸಂತೋಷಕೂಟ

Update: 2021-11-14 15:24 GMT

ಮಲ್ಪೆ, ನ.14: ಮಲ್ಪೆ ಫವರ್ಸ್‌ ಆಫ್ ಪ್ಯಾರಡೈಸ್ ಪಬ್ಲಿಕ್ ಶಾಲೆಯಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯ ಸಂತೋಷ ಕೂಟವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ ವಿದ್ಯಾರ್ಥಿಗಳಿಗೆ ದೀಪಾವಳಿ ಹಬ್ಬದ ಸಂದೇಶ ನೀಡಿ, ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ, ಜನರ ಬದುಕನ್ನು ಬೆಳಗಿಸುವಂತೆ ಪ್ರೇರಣೆ ಕೊಡುವ ಹಬ್ಬ ದೀಪಾವಳಿ. ಭಾರತೀಯರಾದ ನಾವು, ನಾವೆಲ್ಲ ಒಂದೇ ದೇಶದ ಪ್ರಜೆಗಳು, ಒಂದೇ ಮನೆಯ ಮಕ್ಕಳು ಎಂಬ ಮನೋಭಾವನೆಯಿಂದ ಪರಸ್ಪರ ಬಾಳನ್ನು ಬೆಳಗಿಸಲು ಪ್ರಯತ್ನಿಸಿದಾಗ ಈ ಶಾಂತಿ-ಸಮೃಧ್ಧಿಯ ದೇಶವಾಗುತ್ತದೆ, ಎಲ್ಲರ ಬದುಕು ಬೆಳಗುತ್ತದೆ ಎಂದರು.

ಮಲ್ಪೆ ಎಜುಕೇಶನ್ ಟ್ರಸ್ಟ್  ಅಧ್ಯಕ್ಷ ಎಫ್.ಎಂ. ಅಬ್ದುಲ್ ರಝಾಕ್, ಪ್ರಾಥಮಿಕ ಶಾಲಾ ಶಿಕ್ಷಕಿ ಸಹನಾ ಅನಿಲ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ರಿನಾಝ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News