ಕಾರ್ಕಳ: ನ.18ರಿಂದ ಫ್ಯಾಬ್ರಿಕ್ ಪೈಂಟಿಂಗ್, ಜುವೆಲ್ಲರಿ ತಯಾರಿಸುವ ಉಚಿತ ತರಬೇತಿ ಶಿಬಿರ
Update: 2021-11-14 22:17 IST
ಕಾರ್ಕಳ: ಶ್ರೀನಿವಾಸ ಸೇವಾ ಟ್ರಸ್ಟ್ ಹಾಗೂ ಸುಮೇಧ ಪ್ಯಾಶನ್ ಇನ್ಸ್ಟಿಟ್ಯೂಟ್ ಆ್ಯಂಡ್ ಪ್ಯಾಬ್ರಿಕ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ 3 ದಿನಗಳ ಪ್ಯಾಬ್ರಿಕ್ ಪೈಂಟಿಂಗ್, ಜುವೆಲ್ಲರಿ ತಯಾರಿಸುವ ಉಚಿತ ತರಬೇತಿ ಶಿಬಿರವು ನ. 18 ರಿಂದ 20 ರವರೆಗೆ ಕಾರ್ಕಳ ಮುಖ್ಯ ರಸ್ತೆಯ ಎಸ್ ಜೆ ಆರ್ಕೆಡ್ ನ ಸುಮೇಧ ಪ್ಯಾಶನ್ ಇನ್ಸ್ಟಿಟ್ಯೂಟ್ ನಲ್ಲಿ ಬೆಳಗ್ಗೆ10ರಿಂದ ಸಂಜೆ 4ರವರೆಗೆ ನಡೆಯಲಿದೆ.
ಈ ಶಿಬಿರದಲ್ಲಿ ಬ್ಲೌಸ್ ಎಂಬ್ರಾಯ್ಡರಿ ಪೈಂಟಿಂಗ್, ಟೈ ಆ್ಯಂಡ್ ಡ್ರೈ, ಪ್ಯಾಚ್ ವರ್ಕ್, ಕಚ್ ವರ್ಕ್, ಜುವೆಲ್ಲರಿ ಮೇಕಿಂಗ್ ಮುಂತಾದ ವಿಷಯದಲ್ಲಿ ತರಬೇತಿ ನೀಡಲಾಗುವುದು.
ನ. 17ರ ವರೆಗೆ ಮೊಬೈಲ್ ಸಂಖ್ಯೆ 7022044193 ಅಥವಾ 7353211991ಗೆ ಕರೆ ಮಾಡಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಶ್ರೀನಿವಾಸ ಸೇವಾ ಟ್ರಸ್ಟ್ ಹಾಗೂ ಸುಮೇಧ ಪ್ಯಾಶನ್ ಇನ್ಸ್ಟಿಟ್ಯೂಟ್ ಮುಖ್ಯಸ್ಥೆ ಸಾಧನ ಜಿ ಆಶ್ರಿತ್ ತಿಳಿಸಿದ್ದಾರೆ.