×
Ad

ಹಿಂದುತ್ವ ಸಂಘಟನೆಗಳಿಂದ ಬೆದರಿಕೆ: ಗೋವಾದಲ್ಲಿನ ಕಾಮೆಡಿಯನ್‌ ಮುನವ್ವರ್‌ ಫಾರೂಕಿ ಕಾರ್ಯಕ್ರಮ ರದ್ದು

Update: 2021-11-15 12:19 IST
‌Facebook: Munawar Faruqui

ಪಣಜಿ: ಈಗಾಗಲೇ ದೇಶದ ವಿವಿಧೆಡೆಗಳಲ್ಲಿ ಕಾಮೆಡಿಯನ್‌ ಮುನವ್ವರ್‌ ಫಾರೂಕಿ ಕಾರ್ಯಕ್ರಮವನ್ನು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಸೋಮವಾರದದಂದು ಗೋವಾದ ಪಣಜಿಯಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮವನ್ನು ಇದೇ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕಕರು ಮಾಹಿತಿ ನೀಡಿರುವುದಾಗಿ scroll.in ವರದಿ ಮಾಡಿದೆ.

"ಫಾರೂಕಿ ಹಿಂದೂ ದೇವ ದೇವತೆಯರ ಕುರಿತು ಅಶ್ಲೀಲ ಹಾಸ್ಯಗಳನ್ನು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ನಡೆಯಲು ಗೋವಾ ಸರಕಾರ ಅನುಮತಿ ನೀಡಬಾರದು" ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದ್ದಾಗಿ hindustantimes ವರದಿ ಮಾಡಿದೆ. "ಗೋವಾದಲ್ಲಿ ಚುನಾವಣೆಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಈ ಕಾರ್ಯಕ್ರಮ ಆಯೋಜಿಸುವುದು ಸಮಾಜದಲ್ಲಿ ಅಹಿತಕರ ಘಟನೆಗಳಿಗೆ ಕಾರಣವಾಗಬಹುದು" ಎಂದು ಸಂಘಟನೆಯ ವಕ್ತಾರ ಜಯೇಶ್‌ ತಾಲಿ ಹೇಳಿಕೆ ನೀಡಿದ್ದಾರೆ.

ಈ ಕಾರ್ಯಕ್ರಮದ ಆಯೋಜಕರಾಗಿದ್ದ ಎಲ್‌ವಿಸಿ ಕಾಮಿಡಿ ಕ್ಲಬ್‌, "ಈ ಕಾರ್ಯಕ್ರಮ ನಡೆದರೆ ಸ್ಥಳಕ್ಕೆ ಆಗಮಿಸಿ ನಾವು ಸ್ವತಃ ಬೆಂಕಿ ಹಚ್ಚಿಕೊಳ್ಳುತ್ತೇವೆ ಎಂದು 500ಕ್ಕೂ ಹೆಚ್ಚು ಮಂದಿ ನಮ್ಮನ್ನು ಬೆದರಿಸಿದ್ದಾರೆ. ಪೊಲೀಸರೊಂದಿಗೆ ಮಾತನಾಡಿದರೂ ಇಂತಹಾ ಕಾರ್ಯಗಳನ್ನು ತಡೆಯಲು ಸಾಧ್ಯವಿಲ್ಲ. ಸೋಮವಾರ ಕಾರ್ಯಕ್ರಮ ನಡೆಯುವುದಿಲ್ಲ. 2 ಶೋಗಳ ಟಿಕೆಟ್‌ ಗಳು ಮಾರಾಟವಾಗಿದ್ದವು. ನಾವು ಕ್ಷಮೆ ಯಾಚಿಸುತ್ತಿದ್ದೇವೆ. ಟಿಕೆಟ್‌ ಹಣ ಮರಳಿ ನೀಡಲಾಗುವುದು" ಎಂದು ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News