ಕೆಸಿಐಎಪಿಎಂ ಅಧ್ಯಕ್ಷರಾಗಿ ಡಾ.ಎನ್.ಕಿಶೋರ್ ಆಳ್ವ
Update: 2021-11-15 13:33 IST
ಮಂಗಳೂರು : ಡಾ.ಎನ್ ಕಿಶೋರ್ ಆಳ್ವ ಮಿತ್ತಳಿಕೆ ಇವರು ಇಂಡಿಯನ್ ಅಸೋಸಿಯೇಷನ್ ಆಫ್ ಪೆಥೋಲೊ ಜಿಸ್ಟ್ಸ್, ಕರ್ನಾಟಕ ಸ್ಟೇಟ್ ಚ್ಯಾಪ್ಟರ್ ( ಕೆಸಿಐಎಪಿಎಂ) ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮಿತ್ತಳಿಕೆ ಮನೆಯವರಾದ ಇವರು ಪ್ರಸ್ತುತ ರಾಮಯ್ಯ ಮೆಡಿಕಲ್ ಕಾಲೇಜು ಬೆಂಗಳೂರು ಇಲ್ಲಿ ಪ್ರಾಚಾರ್ಯರಾಗಿ ಮತ್ತು ಈಶ ಡಯಗ್ನೋಸ್ಟಿಕ್ ಸೆಂಟರ್ ಬೆಂಗಳೂರು ಇದರ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತಿದ್ದಾರೆ. ಇವರು ಕಾರಮುಗೇರು ಶಾಂತ ಆಳ್ವ ಮತ್ತು ಮಿತ್ತಳಿಕೆ ಸರಸ್ವತಿ ಎಸ್ ಆಳ್ವ ಇವರ ಪುತ್ರರಾಗಿದ್ದಾರೆ.