ಹಾಜಿ ಇಬ್ರಾಹೀಂ ಬೋಳಾರ ನಿಧನ
Update: 2021-11-15 14:05 IST
ಮಂಗಳೂರು, ನ.15 ಮೂಲತಃ ಅಂಬ್ಲಮೊಗರು ಗ್ರಾಮದ ಪರೆಕಳದ ಪ್ರಸ್ತುತ ನಗರದ ಬೋಳಾರದ ನಿವಾಸಿ ಹಾಜಿ ಇಬ್ರಾಹೀಂ ಬೋಳಾರ ಯಾನೆ ಇಬ್ರಾಹೀಂ ಭಂಡಾರಿಪಾದೆ (69) ಸೋಮವಾರ ಬೆಳಗ್ಗೆ ನಿಧನರಾದರು.
ಮೃತರು ಪತ್ನಿ, ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾಗಿದ್ದ ಹಾಜಿ ಇಬ್ರಾಹೀಂ ಈ ಹಿಂದೆ ಕುಂಡೂರು ಜುಮಾ ಮಸೀದಿಯ ಕಾರ್ಯದರ್ಶಿಯಾಗಿದ್ದರು. ಪ್ರಸ್ತುತ ಕುಂಡೂರು ಮಸೀದಿಯ ಲೆಕ್ಕಪರಿಶೋಧಕರಾಗಿ ಮತ್ತು ಎಲ್ಯಾರ್ ಬಿಲಾಲ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪಿಎಫ್‌ಐ ಸಂಘಟನೆ ಮತ್ತು ಎಸ್‌ಡಿಪಿಐ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದ ಹಾಜಿ ಇಬ್ರಾಹೀಂ ಬೋಳಾರದಲ್ಲಿ ನೆಲೆಸಿದ್ದರೂ ಕೂಡ ತನ್ನೂರಾದ ಅಂಬ್ಲಮೊಗರು, ಎಲ್ಯಾರ್ ಪರಿಸರದ ಅರ್ಹರಿಗೆ ಅಗತ್ಯ ನೆರವು ನೀಡುವ ಮೂಲಕ ಜನಾನುರಾಗಿದ್ದರು.
ಅಸರ್ ನಮಾಝ್ ಬಳಿಕ ಕುಂಡೂರು ಜುಮಾ ಮಸೀದಿಯಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.