×
Ad

ಮಂಗಳೂರು : ಕಿಡಿಗೇಡಿಗಳಿಂದ ಬಸ್ಸಿಗೆ ಕಲ್ಲೆಸೆತ

Update: 2021-11-15 15:03 IST

ಮಂಗಳೂರು, ನ.15: ಮಣಿಪಾಲ-ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಎಕೆಎಂಎಸ್ ಎಕ್ಸ್‌ಪ್ರೆಸ್ ಬಸ್ ಕೋಡಿಕಲ್ ಕ್ರಾಸ್ ತಲುಪಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಕಿಡಿಗೇಡಿಗಳು ಬಸ್ಸಿನ ಗಾಜಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಲ್ಲೆಸೆತದಿಂದ ಬಸ್ಸಿನ ಗಾಜಿಗೆ ಹಾನಿಯಾಗಿದೆ. ಕಿಡಿಗೇಡಿಗಳು ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಕಾಣದಂತೆ ಮರೆಮಾಚಿದ್ದಾರೆ. ಕಳೆದ ವಾರ ಪಣಂಬೂರು ಸಮೀಪ ಕಾಟಿಪಳ್ಳ ಕೈಕಂಬದಿಂದ ಮಂಗಳಾದೇವಿ ರೂಟ್‌ನತ್ತ ಬರುತ್ತಿದ್ದ ಖಾಸಗಿ ಸಿಟಿ ಬಸ್ಸಿಗೆ ಕಲ್ಲೆಸೆಯಲಾಗಿತ್ತು. ಇದೀಗ ಈ ಪರಿಸರದಲ್ಲಿ ಎಡನೆ ಬಾರಿಗೆ ನಡೆದ ಘಟನೆ ಇದಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News