×
Ad

ತ್ರಿಪುರಾ ಹಿಂಸಾಚಾರ ವರದಿ ಕುರಿತು ಬಂಧಿಸಲ್ಪಟ್ಟಿದ್ದ ಇಬ್ಬರು ಪತ್ರಕರ್ತೆಯರಿಗೆ ಜಾಮೀನು

Update: 2021-11-15 17:08 IST
Photo: Indianexpress

ತ್ರಿಪುರಾ: ತ್ರಿಪುರಾ ಹಿಂಸಾಚಾರಕ್ಕೆ ಸಂಬಂಧಿಸಿ ವರದಿ ಮಾಡಿದ್ದ ಇಬ್ಬರು ಪತ್ರಕರ್ತೆಯರನ್ನು ತ್ರಿಪುರಾ ಪೊಲೀಸರು ಬಂಧಿಸಿದ ಬಳಿಕ ಇದೀಗ ತ್ರಿಪುರಾದ ಗೋಮತಿ ಜಿಲ್ಲೆಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಎಂದು ndtv.com ವರದಿ ಮಾಡಿದೆ. 

ಸಮೃದ್ಧಿ ಸಕುನಿಯಾ ಮತ್ತು ಸ್ವರ್ಣಾ ಝಾ ಅವರು ತ್ರಿಪುರಾದಲ್ಲಿ ಇತ್ತೀಚೆಗೆ ನಡೆದಿದ್ದ ಹಿಂಸಾಚಾರದ ಕುರಿತು ವರದಿ ಮಾಡುತ್ತಿದ್ದರು. ತ್ರಿಪುರಾದಲ್ಲಿ ಮಸೀದಿಯೊಂದನ್ನು ಧ್ವಂಸ ಮಾಡಿದ ಕೃತ್ಯವನ್ನು ವರದಿ ಮಾಡಿದ ಬಳಿಕ ಕೋಮು ಸೌಹಾರ್ದತೆ ಕದಡುವ ಪ್ರಕರಣವನ್ನು ದಾಖಲಿಸಿ ಅವರನ್ನು ಅಸ್ಸಾಂನಲ್ಲಿ ಬಂಧಿಸಲಾಗಿತ್ತು.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪತ್ರಕರ್ತರ ವಿರುದ್ಧ ಪೊಲೀಸ್ ಕ್ರಮವನ್ನು ಖಂಡಿಸಿದೆ ಮತ್ತು ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ "ಅವರ ಪ್ರಯಾಣದ ಸ್ವಾತಂತ್ರ್ಯವನ್ನು ಮರುಸ್ಥಾಪಿಸಬೇಕು" ಎಂದು ಒತ್ತಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News