30 ಸಾಧಕರಿಗೆ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ ಪ್ರದಾನ
ಹೆಬ್ರಿ, ನ.15: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಉಡುಪಿ ಜಿಲ್ಲಾ ಪತ್ರಕರ್ತರ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಅಜೆಕಾರು ರಾಮಮಂದಿರದ ಆದಿಗ್ರಾಮೋತ್ಸವ ವೇದಿಕೆ ಯಲ್ಲಿ ರವಿವಾರ ಆಯೋಜಿಸಲಾದ ಸಮಾರಂಭದಲ್ಲಿ 30 ಮಂದಿ ವಿಶೇಷ ಸಾಧಕ ಮಕ್ಕಳಿಗೆ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ- 2021ನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮವನ್ನು ಯುವ ಜಾದುಗಾರ ಪ್ರಥಮ್ ಕಾಮತ್ ಕಟಪಾಡಿ ಪುನರೂರು ಅವರ ಭಾವಚಿತ್ರವನ್ನು ಜಾದು ಮೂಲಕ ಅನಾವರಣಗೊಳಿಸಿ ಉದ್ಘಾಟಿಸಿದರು. ಕೃಷಿ ಬಿಂಬ ಪತ್ರಿಕೆಯ ಸಂಪಾದಕ ರಾಧಾಕೃಷ್ಣ ತೋಡಿಕಾನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿದರು.
ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಉಪಾಧ್ಯಕ್ಷ ಪ್ರೇಮನಾಥ ಮಾರ್ಲ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರ್.ಬಿ.ಜಗದೀಶ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಅಧ್ಯಕ್ಷೆ ಮಿತ್ರಪ್ರಭ ಹೆಗ್ಡೆ, ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬೊಮ್ಮರಬೆಟ್ಟು ಎ.ನರಸಿಂಹ, ಲೇಖಕ ಸುಧೀರ್ ಸಾಗರ್, ಬೆಳದಿಂಗಳ ಸಮಿತಿಯ ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಅಜೆಕಾರು ಅತಿಥಿಗಳಾಗಿದ್ದರು.
ಉಡುಪಿ ವಿಶ್ವನಾಥ ಶೆಣೈ, ದಿನೇಶ ಹೊಸಂಗಡಿ, ರಾಮಮಂದಿರದ ಗಣೇಶ್ ಹೆಗ್ಡೆ, ಸಮಿತಿಯ ಪದಾಧಿಕಾರಿಗಳಾದ ಎಣ್ಣೆಹೊಳೆ ಸಂತೋಷ ಜೈನ್, ಜಯಂತ್ ಕೋಟ್ಯಾನ್, ನಾಗೇಶ ಕಾಮತ್ ಕಟಪಾಡಿ, ಶಶಿ ಜಯಂತ್, ಅಜೆಕಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥಿರ್ ನಾಯಕ ಸ್ಕಂದ ಉಪಸ್ಥಿತರಿದ್ದರು.
ಸಂಘಟಕ ಡಾ. ಶೇಖರ ಅಜೆಕಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ದರು. ಕಾರ್ಯದರ್ಶಿ ಸೌಮ್ಯಶ್ರೀ ವಂದಿಸಿದರು. ಕವಯತ್ರಿ ಅವನಿ ಉಪಾಧ್ಯಾ ಕಾರ್ಯಕ್ರಮ ನಿರೂಪಿಸಿದರು.