ಮಕ್ಕಳಿಗೆ ನಿರ್ಬಂಧ ಹೇರದೆ ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಿ: ರಾಜಶೇಖರ ಮೂರ್ತಿ
ಕೋಟ ನ.15: ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ, ವಿದ್ಯೆಯನ್ನು ಕಲಿಸುವುದರ ಜೊತೆಗೆ ಪೋಷಕರು ಮಕ್ಕಳತನವನ್ನು ಅನುಭವಿಸ ಬೇಕು. ಅಸಹಜ ಬದುಕಿನಿಂದ ಹೊರಬಂದು, ಯಾವುದೇ ನಿರ್ಬಂಧಗಳನ್ನು ಹೇರದೇ ಸ್ವತಂತ್ರವಾಗಿ ಬದುಕಲು ಮತ್ತು ಅವರ ಪ್ರತಿಭೆಗಳನ್ನು ಹೊರಹಾಕಲು ಅವಕಾಶ ಮಾಡಿಕೊಡಬೇಕು ಎಂದು ಬ್ರಹ್ಮಾವರದ ತಹಶೀಲಾ್ದರ್ ರಾಜಶೇಖರ ಮೂರ್ತಿ ಹೇಳಿದ್ದಾರೆ.
ಕೋಟತಟ್ಟು ಗ್ರಾಪಂ, ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್ ಮತ್ತು ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಟಾನದ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಚಿಲುಮೆ 2021ರ ಅಂಗವಾಗಿ ಕೋಟ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ರವಿವಾರ ನಡೆದ ಅಪ್ಪುಗಾನ ನಮನ, ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ, ಚಿತ್ರಸಂತೆ, ಕಾರಂತ ಬಾಲ ಪುರಸ್ಕಾರ ಪ್ರದಾನ, ಕುದ್ರು ಪೋಸ್ಟರ್ ಅನಾವರಣ, ನಾಟಕ ಪ್ರದರ್ಶನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೋಟ ವಿವೇಕ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿ ರೋಶನ್ ಗಿಳಿಯಾರು ಮಾತನಾಡಿ, ಕೂಡು ಕುಟುಂಬ ಇಂದು ಇಲ್ಲದೇ ಇರುವುದರಿಂದ ಮಕ್ಕಳಿಗೆ ಪೌರಾಣಿಕ ಕಥೆ ಕೇಳುವ ಭಾಗ್ಯ ದೂರವಾಗಿದೆ. ಕೋವಿಡ್ ಸಮಯದಲ್ಲಿ ನಲುಗಿರುವ ನಮ್ಮಂತ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ, ಪ್ರೋ ಮತ್ತು ಪೋಷಣೆಯ ಅಗತ್ಯವಿದೆ ಎಂದು ಹೇಳಿದರು.
ಕೋಟತಟ್ಟು ಗ್ರಾಪಂ ಪಿಡಿಓ ಶೈಲಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಕೋಟದ ಪ್ರಗತಿಪರ ಕೃಷಿಕ ರವೀಂದ್ರ ಐತಾಳ, ಚಿತ್ರಸಂತೆ ಅನಾ ವರಣಗೊಳಿಸಿದರು. ಚಿತ್ರಕಲಾ ಶಿಕ್ಷಕ ಗಿರೀಶ್ ಆಚಾರ್ಯ ಮತ್ತು ರೋಶನ್ ಗಿಳಿಯಾರು ಅವರನ್ನು ಗೌರವಿಸಲಾಯಿತು.
ಸಾಂಸ್ಕೃತಿಕ ಚಿಂತಕಿ ಹಾಗೂ ವಕೀಲೆ ಬಿಂದು ತಂಗಪ್ಪನ್, ಸಾಲಿಗ್ರಾಮ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರನಾಥ ಹೊಳ್ಳ, ಯಡ್ತಾಡಿಯ ಉದ್ಯಮಿ ರಾಜು ಪೂಜಾರಿ, ಅಮೃತಾ ಉಪಾಧ್ಯ, ಭಾಗೇಶ್ವರಿ ಮಯ್ಯ ಉಪಸ್ಥಿತರಿದ್ದರು.
ಪ್ರತಿಷ್ಟಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರಂತ ಥೀಂ ಪಾರ್ಕ್ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು. ಮೇಲ್ವಿಚಾರಕ ಪ್ರಶಾಂತ್ ವಂದಿಸಿದರು. ಅಧ್ಯಾಪಕ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳಿಂದ ವಿವಿಧ ಕಾರ್ಯ ಕ್ರಮಗಳು ನಡೆದವು.