×
Ad

'ಕೊರೋನ ಹಿಂದಿನ ಸ್ಥಿತಿಗೆ ಕೊಂಕಣ ರೈಲ್ವೆ ಸೇವೆ'

Update: 2021-11-15 21:38 IST

ಉಡುಪಿ, ನ.15: ರೈಲ್ವೆ ಸಚಿವಾಲಯದ ಸೂಚನೆಯಂತೆ ಇಂದಿನಿಂದ ಕೊಂಕಣ ರೈಲ್ವೆ ಮಾರ್ಗದ ರೈಲುಗಳು ಕೊರೋನ ಪೂರ್ವ ದಿನಗಳ ಸ್ಥಿತಿಯಲ್ಲಿ ಸಂಚರಿಸಲಿದ್ದು, ರೈಲುಗಳಿಗೆ ಹಿಂದಿನ ಸಂಖ್ಯೆ ಹಾಗೂ ಅಂದಿನ ಟಿಕೇಟ್ ದರಗಳು ಲಾಗೂಗೊಳ್ಳಲಿವೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ.

ಇದರಂತೆ ಈಗ 01497 ನಂ.ನ ಮಡಗಾಂವ್- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಇಂದಿನಿಂದ ಹಳೆಯ 10107 ನಂ.ನೊಂದಿಗೆ ಮಡಗಾಂವ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಓಡಾಟ ನಡೆಸಲಿದೆ. ಅದೇ ರೀತಿ ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ನಡುವೆ ಸಂಚರಿಸುವ 01498 ನಂ.ನ ರೈಲು ಇನ್ನು ಮುಂದೆ ಹಳೆಯ 10108 ನಂ.ನೊಂದಿಗೆ ಸಂಚರಿಸಲಿದೆ.

ಈ ದೈನಂದಿನ ರೈಲುಗಳು ರವಿವಾರವನ್ನು ಹೊರತು ಪಡಿಸಿ, ಉಳಿದ ವಾರದ ಆರು ದಿನಗಳಲ್ಲಿ ಸಂಚರಿಸಲಿವೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News