ದುಬೈ: ಎಸ್ಕೆಎಸ್ಸೆಸ್ಸೆಫ್ ವಿಖಾಯ ಕರ್ನಾಟಕ ಯುಎಇ ಸಮಿತಿಯಿಂದ ರಕ್ತದಾನ ಶಿಬಿರ

Update: 2021-11-16 05:11 GMT

ದುಬೈ: ಎಸ್ಕೆಎಸ್ಸೆಸ್ಸೆಫ್ ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ದುಬೈ ಲತೀಫ ಆಸ್ಪತ್ರೆ ರಕ್ತದಾನ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರ ಶುಕ್ರವಾರ ನಡೆಯಿತು.

ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷ ಸಯ್ಯದ್ ಅಸ್ಕರ್ ಅಲಿ ತಂಙಳ್ ಅವರು ದುವಾದೊಂದಿಗೆ ಚಾಲನೆ ನೀಡಿದರು, ಕೋಶಾಧಿಕಾರಿ  ಅಬ್ದುಲ್ ಲತೀಫ್ ಕೌಡಿಚ್ಚಾರ್ ಅವರು ನೆರೆದವರನ್ನು ಶಿಬಿರಕ್ಕೆ ಬರಮಾಡಿದರು. ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಉಪಾಧ್ಯಕ್ಷ ಉದ್ಯಮಿ ಅಶ್ರಫ್ ಶಾ ಮಾಂತೂರು ಅವರು ಮಾತನಾಡಿ ಶಿಬಿರವನ್ನು  ಉದ್ಘಾಟಿಸಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎವಿರೇಟ್ಸ್ ಎಕ್ಸ್ಚೇಂಜ್ ನ ರವಿ ಶೆಟ್ಟಿ ಅವರು ಮಾತನಾಡಿ, ರಕ್ತದಾನ ಶಿಬಿರಕ್ಕೆ ಶುಭ ಹಾರೈಸಿದರು. ದುಬೈ ಮತ್ತು ಶಾರ್ಜಾದ ವಿವಿಧ ಸ್ಥಳಗಳಿಂದ 200ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿದ್ದರು.  164 ಯುನಿಟ್ ರಕ್ತ ಸಂಗ್ರಹಿಸುವ ಮೂಲಕ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.

ರಕ್ತದಾನಿಗಳಿಗೆ ಫಲಾಹಾರ, ಜ್ಯೂಸ್ ವಿತರಣೆ ಮಾಡಲಾಯಿತು ಹಾಗೂ ದುಬೈ ಮತ್ತು ಶಾರ್ಜಾ ದ ವಿವಿಧ ಸ್ಥಳಗಳಿಂದ ವಾಹನದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ, ವಿಖಾಯ ಕರ್ನಾಟಕ ಯುಎಇ ಸಮಿತಿಯ ಚಯರ್ ಮೇನ್ ನವಾಝ್ ಬಿಸಿ ರೋಡ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಕ್ತದಾನಿಗಳಿಗೆ ಮತ್ತು ಸ್ವಯಂ ಸೇವರಾಗಿ ಸೇವೆ ಸಲ್ಲಿಸಿದ ವಿಖಾಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ರಕ್ತದಾನ ಶಿಬಿರದಲ್ಲಿ ಯುಎಇ ಸಮಸ್ತ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಶಂಸುದ್ದೀನ್ ಸೂರಲ್ಪಾಡಿ, ಬದ್ರುದ್ದೀನ್ ಹೆಂತಾರ್, ಅಬ್ದುಲ್ ಸಲಾಂ ಬಪ್ಪಲಿಗೆ, ಶೆರೀಫ್ ಕಾವು, ಶೆರೀಫ್ ಕೊಡಿನೀರು, ಅಬ್ದುಲ್ ಲತೀಫ್ ಮದರ್ ಇಂಡಿಯಾ ಹಾಗೂ ಸಿರಾಜುದ್ದೀನ್ ಫೈಝಿ ಬಂಟ್ವಾಳ, ಎಸ್ಕೆಎಸ್ಸೆಸ್ಸೆಫ್ ಜಿಸಿಸಿ ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ ಬಜೆಗುಂಡಿ, ಕೋಶಾಧಿಕಾರಿ ರಝಾಕ್ ಫೈಝಿ ಎಡಪ್ಪಾಲ್ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು. ರಫೀಕ್ ಆತೂರು ಅವರು ಶುಭ ಹಾರೈಸಿದ್ದರು‌.

ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ಸಮಿತಿ,  ದಾರುನ್ನೂರು ಯುಎಇ ರಾಷ್ಟ್ರೀಯ ಸಮಿತಿ, ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿ,  ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ತೋಡಾರು ಯುಎಇ ಸಮಿತಿ,  ದಾರುಸ್ಸಲಾಂ ಎಜುಕೇಶನ್ ಸೆಂಟರ್ ಯುಎಇ ಸಮಿತಿಯ ಪದಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ ಯಶಸ್ವಿಗೆ ಸಹಕರಿಸಿದ್ದರು.

ವಿಖಾಯ ಕರ್ನಾಟಕ ಯುಎಇ ರಕ್ತದಾನ ಸಮಿತಿಯ ಕೊ-ಚಯರ್ ಮೇನ್ ಜಲೀಲ್ ಉಕ್ಕುಡ ಅವರು ಮಾತನಾಡಿ ರಕ್ತದಾನಿಗಳಿಗೆ ಮತ್ತು ಸಹಕರಿಸಿದ ಎಲ್ಲರಿಗೂ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News