×
Ad

ಅಕ್ರಮ ಹಣ ವರ್ಗಾವಣೆ ಪ್ರಕರಣ: ರಿಯಲ್ ಎಸ್ಟೇಟ್ ಉದ್ಯಮಿ ಲಲಿತ್ ಗೋಯಲ್‌ ರನ್ನು ಬಂಧಿಸಿದ ಈಡಿ

Update: 2021-11-16 11:57 IST

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಐಆರ್ ಇಒ ಗ್ರೂಪ್ ಅಧ್ಯಕ್ಷ ಲಲಿತ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ(ಈಡಿ) ಮಂಗಳವಾರದಂದು ಬಂಧಿಸಿದೆ ಎಂದು NDTV ವರದಿ ಮಾಡಿದೆ.

ಈ ಉದ್ಯಮಿ ಕಳೆದ ವಾರ ಅಮೆರಿಕಕ್ಕೆ ತೆರಳಲು ಹೊರಟಿದ್ದಾಗ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆರ್ಥಿಕ ಅಪರಾಧಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಗೋಯಲ್ ವಿರುದ್ಧ ಲುಕ್ಔಟ್  ನೋಟಿಸ್ ನೀಡಿತ್ತು.

"ತನಿಖೆಗೆ ಸಹಕರಿಸದ ಕಾರಣ ಗೋಯಲ್ ಅವರನ್ನು ಬಂಧಿಸಲಾಗಿದೆ" ಎಂದು ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಗೋಯಲ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದು ಗುರುವಾರ ವಿಚಾರಣೆ ನಡೆಸಲಾಯಿತು. ಅವರು  ತಪ್ಪಿಸಿಕೊಳ್ಳುವವನಾಗಿದ್ದರಿಂದ ಬಂಧನ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಆರ್ ಇಒ 2010 ರಿಂದ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (ಫೆಮಾ) ಉಲ್ಲಂಘನೆಯನ್ನು ಒಳಗೊಂಡಿರುವ ಪ್ರಕರಣದ ತನಿಖೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News