×
Ad

ಶಿಕ್ಷಕರಿಗೆ ನಿರಂತರ ಕಲಿಕೆ ಅಗತ್ಯ: ಚಂದ್ರ ನಾಯ್ಕ

Update: 2021-11-16 18:47 IST

ಉಡುಪಿ, ನ.16: ಜಿಲ್ಲೆಯ ಅನುದಾನ ರಹಿತ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಎರಡು ದಿನಗಳ ಕಾಲ ನಡೆದ ಕಾರ್ಯಗಾರದ ಸಮಾರೋಪ ಸಮಾರಂಭ ಡಯಟ್‌ನ ಉಪನ್ಯಾಸಕ ಚಂದ್ರ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ತರಬೇತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯಗಳು, ಶಾಲೆಗಳಲ್ಲಿ ನಿರ್ವಹಿಸಬೇಕಾದ ಕಡತಗಳು, ಸಂಸ್ಥೆಯಲ್ಲಿ ಅನುಸರಿಸಬೇಕಾದ ಆಡಳಿತಾತ್ಮಕ ನಿಯಮಗಳು, ರಚನಾತ್ಮಕ ತರಗತಿ ಕೋಣೆ ನಿರ್ವಹಣೆ, ಕಲಿಕೋಪಕರಣಗಳ ತಯಾರಿ ಮುಂತಾದ ವಿಷಯಗಳ ಬಗ್ಗೆ ಸಂಪನ್ನೂಲ ವ್ಯಕ್ತಿಗಳೊಡನೆ ಚರ್ಚೆ, ಸಂವಾದ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಡಯಟ್‌ನ ಉಪ ಪ್ರಾಂಶುಪಾಲ ಡಾ.ಆಶೋಕ ಕಾಮತ್, ಉಪನ್ಯಾಸಕರಾದ ಸುಬ್ರಹ್ಮಣ್ಯ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಬಿ.ಆರ್ ಪ್ರಕಾಶ್, ಮರವಂತೆ ಶಾಲೆಯ ಮುಖ್ಯ ಶಿಕ್ಷಕ ಸತ್ಯನಾ ಕೊಡೇರಿ ಭಾಗವಹಿಸಿದ್ದರು

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಚಂದ್ರ ನಾಯ್ಕಾ, ಶಿಕ್ಷಕರು ನಿರಂತರವಾಗಿ ಕಲಿಯುತ್ತಿರಬೇಕು ಹಾಗೂ ತಮ್ಮ ಜ್ಞಾನವನ್ನು ಉನ್ನತೀಕರಿಸಿಕೊಳ್ಳಲು ಪ್ರಯತ್ನಿಸಬೇಕೆಂದು ತಿಳಿಸಿದರು. ಬಿವಿಟಿಯ ಮನೋಹರ ಕಟ್ಗೇರಿ ಮಾತನಾಡಿ, ಶಿಕ್ಷಕ ಮತ್ತು ನರ್ಸಿಂಗ್ ವೃತ್ತಿಗಳು ಜನರ ಸೇವೆಗೆ ಅತ್ಯಂತ ಸೂಕ್ತವಾದುದು ಎಂದರು.

ಶಾಂತಿ ನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ರೂಪಾ ಕಿಣಿ ಎರಡು ದಿನಗಳ ಕಾಲ ಜರಗಿದ ಕಾರ್ಯಾಗಾರದ ವರದಿಯನ್ನು ಮಂಡಿಸಿದರು.ಇಬ್ಬರು ಶಿಕ್ಷಕರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಶಿಕ್ಷಕರಿಗೆ ಶುಭ ಕೋರಿದರು. ಕಾರ್ಯಕ್ರಮ ಅಧಿಕಾರಿ ಪ್ರತಿಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News