ಬಿವಿಟಿಯ ಅಶ್ಡೆನ್ ಪ್ರಶಸ್ತಿ ಮೊತ್ತದಲ್ಲಿ ಮೂರು ಯೋಜನೆ ಅನುಷ್ಠಾನ
ಉಡುಪಿ, ನ.16: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಇತ್ತೀಚೆಗೆ ಲಂಡನ್‌ನಲ್ಲಿ 20ಲಕ್ಷ ರೂ. ನಗದು ಸಹಿತ ಜಾಗತಿಕ ಮಟ್ಟದ ಅಶ್ಡೆನ್ ಪ್ರಶಸ್ತಿ ಯನ್ನು ಸ್ವೀಕರಿಸಿದ್ದು, ಈ ಪ್ರಶಸ್ತಿ ಮೊತ್ತದ ಶೇ.50ರಷ್ಟು ಹಣವನ್ನು ಗ್ರಾಮೀಣ ಕರಕುಶಲಕರ್ಮಿಗಳ ಅಭಿವೃದ್ಧಿ, ಭವಿಷ್ಯದ ಶಾಲೆಗಳು ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ವಿನಿಯೋಗಿಸಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಮಾಸ್ಟರ್ ಟ್ರೈನರ್ ಸುಧೀರ್ ಕುಲಕರ್ಣಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ವರ್ಷಗಳ ಅವಧಿಯ ಕುಲಶಕರ್ಮಿಗಳ ಅಭಿವೃದ್ಧಿ ಯೋಜನೆಯನ್ನು ರಾಜ್ಯದ ಎಲ್ಲ ಹಿಂದುಳಿದ ಮತ್ತು ಅಭಿವೃದ್ಧಿಶೀಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗು ವುದು. ಕರಕುಶಲ ಕರ್ಮಿಗಳ ಡೇಟಾ ಬ್ಯಾಂಕ್ ರೂಪಿಸುವುದು ಮತ್ತು ರಾಜ್ಯದ ಸುಮಾರು 500 ಮಂದಿ ಕರಕುಶಲಕರ್ಮಿಗಳನ್ನು ಗುರುತಿಸಿ ಅವರಲ್ಲಿರುವ ವಿಶೇಷ ಕೌಶಲಗಳನ್ನು ಮತ್ತು ಔದ್ಯಮಿಕ ಪ್ರತಿಭೆಗಳನ್ನು ದಾಖಲಿಸಲಾಗುವುದು. ಇವರಲ್ಲಿ ಕನಿಷ್ಠ 350 ಮಂದಿಯ ಕೌಶಲವನ್ನು ವೃದ್ಧಿಸಿ ಮಾರುಕಟ್ಟೆಯಲ್ಲಿ ಪ್ರಸ್ತುತಪಡಿಸಲು ಪೂರಕವಾಗಿ ಅಗತ್ಯವಿರುವ ಜ್ಞಾನವನ್ನು ಒದಗಿಸಲಾಗುವುದು ಎಂದರು.
ಭವಿಷ್ಯದ ಶಾಲೆಗಳು ಯೋಜನೆಯಡಿ ಜೀವನ ಕೌಶಲ, ಕೃಷಿ ಮತ್ತು ಮೌಲ್ಯವರ್ಧಿತ ಡಿಜಿಟಲ್ ಕಲಿಕಾ ಉಪಕರಣಗಳು, ಜಲಸಂಪನ್ಮೂಲದ ಮೂಲಕ ಶಿಕ್ಷಣವನ್ನು ಸದೃಢಗೊಳಿಸುವ ಮಾದರಿ ಶಾಲೆಯನ್ನು ರೂಪಿಸಲಾಗು ವುದು. ಭವಿಷ್ಯದ ಮಾದರಿ ಹಸಿರು ಮತ್ತು ಸ್ಮಾರ್ಟ್ ಶಾಲೆ ರೂಪಿಸಲಾಗು ವುದು. 2 ವರ್ಷಗಳ ಅವಧಿಯ ಈ ಯೋಜನೆಯನ್ನು ರಾಜ್ಯದ ಎಲ್ಲ ಹಿಂದುಳಿದ ಮತ್ತು ಅಭಿವೃದ್ಧಿ ಹೊಂದ ಬಯಸುವ ಜಿಲ್ಲೆಗಳಲ್ಲಿ ಅನುಷ್ಠಾನ ಗೊಳಿಸಲಾುವುದು ಎಂದು ಅವರು ತಿಳಿಸಿದರು.
ಒಂದು ವರ್ಷ ಅವಧಿಯ ಈ ಯೋಜನೆಯಡಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆಯ ಉದ್ಯಮ ಮಾದರಿಯನ್ನು ಕಲ್ಪಿಸುವ ಪರಿಸರ ಪರ ಮತ್ತು ಸ್ಮಾರ್ಟ್ ಸಂಸ್ಥೆಗಳನ್ನು ರೂಪಿಸಲಾಗುವುದು. ಇದರಲ್ಲಿ ಮಹಿಳಾ ಸಹಭಾಗಿತ್ವಕ್ಕೆ ಆದ್ಯತೆ ನೀಡಲಾಗುವುದು. ತ್ಯಾಜ್ಯ ನಿರ್ವಹಣೆ ಉದ್ಯಮಗಳಲ್ಲಿ ಜೀವನೋ ಪಾಯದ ಅವ ಾಶಗಳನ್ನು ಸೃಷ್ಟಿಸಲಾಗುವುದು. ಸ್ಥಳೀಯ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಇತರ ಪಾಲುದಾರರನ್ನು ಸೇರಿಸಿಕೊಂಡು, ಮೂಲ ಸೌಕರ್ಯ ಮತ್ತು ಪೂರೈಕೆ ಸರಪಳಿ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಅಗತ್ಯ ಉದ್ಯಮ ಮಾದರಿಯನ್ನು ಅಭಿವೃದ್ದಿಪಡಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿವಿಟಿ ಮುಖ್ಯ ವ್ಯವಸ್ಥಾಪಕ ಮನೋಹರ್ ಕಟಿಗೇರಿ, ಲೆಕ್ಕಪತ್ರ ಮತ್ತು ಹಣಕಾಸು ವಿಭಾಗದ ವ್ಯವಸ್ಥಾಪಕಿ ಶ್ರದ್ಧಾ ಹೇರ್ಳೆ, ಕಾರ್ಯ ಕ್ರಮ ಸಂಯೋಜನಾಧಿಕಾರಿ ಪ್ರತಿಮಾ, ಸಮಾಲೆಚಕಿ ರಾಜಲಕ್ಷ್ಮೀ ಉಪಸ್ಥಿತರಿದ್ದರು.