×
Ad

ಪೆರಂಪಳ್ಳಿ ರಸ್ತೆ ಅಗಲೀಕರಣ: ಸಂತ್ರಸ್ತರಿಗೆ ಪರಿಹಾರ ಧನ ವಿತರಣೆ

Update: 2021-11-16 18:54 IST

ಉಡುಪಿ, ನ.16: ಮಣಿಪಾಲ-ಪೆರಂಪಳ್ಳಿ-ಅಂಬಾಗಿಲು ರಸ್ತೆ ಅಗಲೀಕರಣ ಗೊಳಿಸಲು ಟಿ.ಡಿ.ಆರ್. ಪ್ರಕ್ರಿಯೆ ಮೂಲಕ ಭೂಸ್ವಾಧೀನ ಪಡಿಸಿಕೊಳ್ಳ ಲಾಗಿದ್ದು, ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕಟ್ಟಡ ಹಾಗೂ ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕಾ ಮರಗಿಡಗಳನ್ನು ಕಳೆದುಕೊಂಡ ಖಾಸಗಿ ಜಾಗದ ಮಾಲಕರಿಗೆ ಪರಿಹಾರ ಧನವನ್ನು ಇತ್ತೀಚೆಗೆ ವಿತರಿಸಲಾಯಿತು.

ಸಂತ್ರಸ್ತರಾದ ಪ್ರೇಮ ಹೆಗ್ಡೆ, ಯಶೋದ ಪೈ, ಅರುಂಧತಿ ಪೈ, ಹಯಗ್ರೀವ ಭಟ್, ಪಿ.ಸುಬ್ರಾಯ ಕಾಮತ್, ಗೌರಿ ಪೈ ಅವರಿಗೆ ಶಾಸಕ ಕೆ.ರಘುಪತಿ ಭಟ್ ಪರಿಹಾರ ಧನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರಿಧರ್ ಕರಂಬಳ್ಳಿ, ಭಾರತಿ ಪ್ರಶಾಂತ್, ಯೋಗೀಶ್ ವಡಭಾಂಡೇಶ್ವರ, ನಾಮ ನಿರ್ದೇಶಿತ ಸದಸ್ಯರಾದ ಅರುಣಾ ಪೂಜಾರಿ, ಪಿಡಬ್ಲ್ಯೂಡಿ ಕಾರ್ಯಪಾಲಕ ಅಭಿಯಂತರ ರವಿ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಭಟ್, ಸಹಾಯಕ ಅಭಿಯಂತರ ಸೋಮನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News