ಉಡುಪಿ: ನ.21ರಂದು ಧಾರ್ಮಿಕ ಪ್ರವಚನ
Update: 2021-11-16 18:55 IST
ಉಡುಪಿ, ನ.16: ಜಮೀಯತೆ ಅಹ್ಲೆ ಹದೀಸ್ ಉಡುಪಿ ಜಿಲ್ಲೆ ವತಿಯಿಂದ ದೇಶದ ಖ್ಯಾತ ವಿದ್ವಾಂಸ ಶೇಕ್ ಅಬೂ ಝೈದ್ ಝಮೀರ್ ಪೂನಾ ಅವರಿಂದ ಪ್ರವಚನ ಕಾರ್ಯಕ್ರಮವು ನ.21ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಉಡುಪಿ ಜಾಮೀಯಾ ಮಸೀದಿಯಲ್ಲಿ ಮತ್ತು ಮಗ್ರಿಬ್ ನಮಾಝ್ ಬಳಿಕ ಹೊನ್ನಾಳದ ಮಸ್ಜೀದ್ ಎ ಮುಹಮ್ಮದಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.