ವಿಧಾನ ಪರಿಷತ್ ಚುನಾವಣೆ: ದ.ಕ. ಸ್ಥಳೀಯ ಸಂಸ್ಥೆಗೆ ನಾಮಪತ್ರ ಸಲ್ಲಿಕೆ
Update: 2021-11-16 19:35 IST
ಮಂಗಳೂರು, ನ.16: ವಿಧಾನ ಪರಿಷತ್ ದ.ಕ. ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಮಂಗಳವಾರ ಒಂದು ನಾಮಪತ್ರ ಸಲ್ಲಿಕೆಯಾಗಿದೆ.
ಸ್ವತಂತ್ರ ಅಭ್ಯರ್ಥಿಯಾದ ಸುಪ್ರಿತ್ ಕುಮಾರ್ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಆಗಿರುವ ಅಪರ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.