ಹಂಸಲೇಖ ವೃಂದಾವನದಲ್ಲಿ ಪಶ್ಚಾತ್ತಾಪ ನಿವೇದನೆ ಮಾಡಿಕೊಳ್ಳಲಿ: ಪ್ರದೀಪ್ ಕಲ್ಕೂರ
Update: 2021-11-16 19:42 IST
ಮಂಗಳೂರು, ನ. 16: ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಕುರಿತ ಸಂಗೀತ ನಿರ್ದೇಶಕ ಹಂಸಲೇಖರ ಶಬ್ಧ ಪ್ರಯೋಗ ಸಮಾಜದ ಭಾವನೆಳಿಗೆ ಮಾಡಿದೆ, ಈ ಬಗ್ಗೆ ಅವರು ಬೆಂಗಳೂರಿನ ವೃಂದಾವನದಲ್ಲಿ ಪಶ್ಚಾತ್ತಾಪ ನಿವೇದನೆ ಮಾಡಿಕೊಳ್ಳಬೇಕು ಎಂದು ಕಸಪಾ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಮಾಜದಲ್ಲಿ ಗೌರವಕ್ಕೆ ಕಾರಣವಾಗಿದ್ದ ಹಂಸಲೇಖರ ಈ ಹೇಳಿಕೆಯಿಂದ ಪೇಜಾವರ ಶ್ರೀಗಳ ಅನುಯಾಯಿಗಳು ಹಾಗೂ ಸರ್ವಜನರಿಗೆ ನೋವಾಗಿದೆ ಎಂದರು.
ಸ್ವಾತಂತ್ರ ಸ್ವೇಚ್ಛೆ ಅಲ್ಲ. ಮಾತು ಹೇಳಿದ ಬಳಿಕ ತಪ್ಪಾಗಿದೆ ಎಂದು ಹೇಳಿದರೆ ಸಾಲದು. ಅವರು ಮನಪೂರ್ವಕವಾಗಿ ಈ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಹರಿಕೃಷ್ಣ ಪುನರೂರು, ಜಿ.ಕೆ. ಭಟ್ ಸೇರಾಜೆ, ಪೊಳಲಿ ನಿತ್ಯಾನಂದ ಕಾರಂತ, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.