×
Ad

ವಿವಿಧ ಯೋಜನೆಗಳಿಗಾಗಿ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

Update: 2021-11-16 20:19 IST

ಮಂಗಳೂರು ನ.16: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2021-22ರ ಸಾಲಿಗೆ ಶ್ರಮಶಕ್ತಿ, ಕಿರುಸಾಲ, ಗಂಗಾ ಕಲ್ಯಾಣ, ಆಟೊ ರಿಕ್ಷಾ ಇತ್ಯಾದಿ ವಾಹನ ಖರೀದಿ, ಮೈಕ್ರೋ ಕೋವಿಡ್-19 ಸಾಲ ಯೋಜನೆಗಳಡಿ ಅರ್ಹರು ಪ್ರಯೋಜನ ಪಡೆದುಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಅರ್ಹ ಅಲ್ಪಸಂಖ್ಯಾತ ಅಭ್ಯರ್ಥಿಗಳು (ಬೌದ್ಧ, ಕ್ರಿಶ್ಚಿಯನ್, ಜೈನ್ಸ್, ಮುಸ್ಲಿಂ, ಪಾರ್ಸಿ, ಸಿಖ್ಖರು) ವರ್ಗಕ್ಕೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರಕ್ಕೆ 81,000 ರೂ., ನಗರ ವ್ಯಾಪ್ತಿಗೆ 1,03,000 ರೂ.ಗಳನ್ನು ಮೀರಿರಬಾರದು. (ಆಟೊ ರಿಕ್ಷಾ/ಟ್ಯಾಕ್ಸಿ/ಸರಕು ಸಾಗಣೆ ವಾಹನ ಖರೀದಿ ಯೋಜನೆ, 4,50,000 ಲಕ್ಷ ರೂ.ಗಳ ಮಿತಿ ಇರುವುದು)

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದೇ 2021ರ ಡಿಸೆಂಬರ್ 15 ರವರೆಗೆ ಅವಕಾಶವಿದೆ. ಅಭ್ಯರ್ಥಿಗಳು ವೆಬ್‌ಸೈಟ್:ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಝಾದ್ ಅಲ್ಪಸಂಖ್ಯಾತರ ಭವನ, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು-575001 ಅಥವಾ 24/7 ಸಹಾಯವಾಣಿ/ 8277799990 ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News