×
Ad

ಎಸ್‌ಕೆಪಿಎ ಉಪಾಧ್ಯಕ್ಷರಾಗಿ ಪದ್ಮಪ್ರಸಾದ್‌ ಜೈನ್‌ ಆಯ್ಕೆ

Update: 2021-11-16 20:30 IST

ಕಾರ್ಕಳ : ದ.ಕ. ಹಾಗೂ ಉಡುಪಿ ಜಿಲ್ಲೆಯನ್ನೊಳಗೊಂಡ ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಷನ್‌ ಉಪಾಧ್ಯಕ್ಷ ರಾಗಿ ಕಾರ್ಕಳ ಶಿಲ್ಪಾ ಸ್ಟುಡಿಯೋದ ಮಾಲಕ ನೆಲ್ಲಿಕಾರು ಪದ್ಮಪ್ರಸಾದ್‌ ಜೈನ್‌ ಆಯ್ಕೆಯಾಗಿರುತ್ತಾರೆ.

ನ. 16ರಂದು ಮಂಗಳೂರು ಸೆಬಾಸ್ಟಿಯನ್‌ ಹಾಲ್‌ ನಲ್ಲಿ ನಡೆದ ಎಸ್‌ಕೆಪಿಎ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಉಪಾಧ್ಯಕ್ಷರಾಗಿ ಪದ್ಮಪ್ರಸಾದ್‌ ಜೈನ್‌ ಆಯ್ಕೆಯಾಗಿರುತ್ತಾರೆ. ಅಧ್ಯಕ್ಷರಾಗಿ ಬಂಟ್ವಾಳದ ಆನಂದ್‌ ಆಯ್ಕೆಯಾಗಿರುತ್ತಾರೆ. 

ನ್ಯೂಸ್‌ ಕಾರ್ಕಳ ಸಲಹಾ ಸಮಿತಿ ಸದಸ್ಯರಾಗಿ, ಜೇಸಿಸ್‌ ಶಾಲಾ ನಿರ್ದೇಶಕರಾಗಿರುವ ಪದ್ಮಪ್ರಸಾದ್‌ ಜೈನ್‌ ಅವರು ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News