ಉಪಗ್ರಹವನ್ನು ಕ್ಷಿಪಣಿ ಮೂಲಕ ನಾಶಗೊಳಿಸಿದ ಆರೋಪ ನಿರಾಕರಿಸಿದ ರಶ್ಯಾ

Update: 2021-11-16 15:12 GMT
ಸಾಂದರ್ಭಿಕ ಚಿತ್ರ:PTI

ಮಾಸ್ಕೋ, ನ.16: ರಶ್ಯಾವು ಕ್ಷಿಪಣಿ ಉಡಾಯಿಸಿ ಸ್ವಂತ ಉಪಗ್ರಹವನ್ನು ಧ್ವಂಸಗೊಳಿಸಿದ್ದು ಉಪಗ್ರಹದ ಅವಶೇಷಗಳಿಂದ ಉಂಟಾಗಿರುವ ಮೋಡಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿದೆ ಎಂಬ ಅಮೆರಿಕದ ಹೇಳಿಕೆಯನ್ನು ರಶ್ಯಾ ತಳ್ಳಿಹಾಕಿದೆ.

ಬಾಹ್ಯಾಕಾಶದ ಶಾಂತಿಯುತ ಬಳಕೆಯ ಉದ್ದೇಶಕ್ಕೆ ರಶ್ಯಾ ಒಕ್ಕೂಟ ಅಪಾಯ ತರುತ್ತಿದೆ ಎಂಬುದು ಅತ್ಯಂತ ಕನಿಷ್ಟ ಮಟ್ಟದ ಮತ್ತು ಬೂಟಾಟಿಕೆಯ ಹೇಳಿಕೆಯಾಗಿದೆ . ಈ ಹೇಳಿಕೆಗೆ ಯಾವುದೇ ಆಧಾರವಿಲ್ಲ ಮತ್ತು ಇದರಲ್ಲಿ ವಾಸ್ತವಾಂಶವಿಲ್ಲ ಎಂದು ರಶ್ಯಾದ ವಿದೇಶ ವ್ಯವಹಾರ ಸೆರ್ಗಿ ಲಾವೋರ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ರಶ್ಯಾವು ತನ್ನ ಹಳೆಯ ಉಪಗ್ರಹವನ್ನು ಕ್ಷಿಪಣಿ ಪ್ರಯೋಗಿಸಿ ನಾಶಗೊಳಿಸಿದ್ದು , ಈ ಅಜಾಗರೂಕ ಮತ್ತು ಬೇಜವಾಬ್ದಾರಿ ಕೃತ್ಯದಿಂದಾಗಿ ಉಪಗ್ರಹದ ಸುಮಾರು 1,500 ಚೂರುಗಳು ಬಾಹ್ಯಾಕಾಶದಲ್ಲಿ ಸಂಗ್ರಹವಾಗಿದ್ದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪಾಯ ತರುವ ಸಾಧ್ಯತೆಯಿದೆ ಎಂದು ಸೋಮವಾರ ಅಮೆರಿಕದ ಅಧಿಕಾರಿಗಳು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News