×
Ad

ಅಸೈಗೋಳಿ: ಉಚಿತ ಫೂಟ್ ಪಲ್ಸ್ ಥೆರಪಿ ಉದ್ಘಾಟನೆ

Update: 2021-11-16 22:57 IST

ಮಂಗಳೂರು: ಜೆಸಿಐ ಮಂಗಳ ಗಂಗೋತ್ರಿ ಕೊಣಾಜೆ ಇದರ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಫೋಕಸ್ ತೊಕ್ಕೊಟ್ಟು, ಗುರು ಎಜುಕೇಷನ್ ಸೆಂಟರ್, ಅಟೋ ಚಾಲಕರ ಸಂಘ, ಮೇರ್ಸಿ ಫ್ರೆಂಡ್ಸ್ ಅಸೈಗೋಳಿ,ಕಂಪಾನಿಯೊ ಮಂಗಳೂರು ಇವರ ಸಹಯೋಗದಲ್ಲಿ ಉಚಿತ  ಫೂಟ್ ಪಲ್ಸ್ ಥೆರಪಿ ಶಿಬಿರ ದ ಉದ್ಘಾಟನೆ ಅಸೈಗೋಳಿಯಲ್ಲಿ ಮಂಗಳವಾರ ನಡೆಯಿತು.

ವಿವಿ ಪ್ರೊಫೆಸರ್ ಪ್ರಶಾಂತ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ , ಜೆಸಿಐ ಉತ್ತಮ ಕಾರ್ಯ ಕ್ರಮ ಹಮ್ಮಿಕೊಂಡಿದೆ. 15 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದ ಸದುಪಯೋಗ ನನ್ನು ಎಲ್ಲರೂ ಪಡೆದು ಕೊಳ್ಳಬೇಕು. ಇಂತಹ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಅಧ್ಯಕ್ಷ ಫ್ರಾಂಕ್ಲಿನ್ ಫ್ರಾನ್ಸಿಸ್ ಕುಟ್ಟಿನ್ಹ  ಸ್ವಾಗತಿಸಿದರು.

ಕಾರ್ಯಕ್ರಮ ದಲ್ಲಿ ಅರುಣ್ ಮೊಂತೆರೋ, ಪ್ರದೀಪ್, ದೈಹಿಕ ಶಿಕ್ಷಕ ತ್ಯಾಗಂ ಹರೇಕಳ, ಶ್ರೀಧರ್ ಕಪಾನಿಯಂ ಮುಖ್ಯಸ್ಥ  ಶ್ರೀಧರ್, ನಿವೃತ್ತ ಶಿಕ್ಷಕ ಆನಂದ ಕೆ ಅಸೈಗೋಳಿ,  ಪ್ರಶಾಂತ್ ಡಿಸೋಜ ಅಟೋ ಚಾಲಕ ಸಂಘದ ಕಾರ್ಯದರ್ಶಿ ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಮಾ ಹೆಬ್ಬಾರ್ ನಿರೂಪಿಸಿದರು. ಜಯಲಕ್ಷ್ಮಿ ವಂದಿಸಿದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News