ನಾಗರಿಕರ ಹತ್ಯೆ ವಿರುದ್ಧ ಪ್ರತಿಭಟನೆ ನೇತೃತ್ವ ವಹಿಸಿದ್ದ ಮೆಹಬೂಬಾ ಮುಫ್ತಿಗೆ ಗೃಹಬಂಧನ

Update: 2021-11-17 16:56 GMT

ಶ್ರೀನಗರ: ಭದ್ರತಾ ಪಡೆಗಳು ನಡೆಸಿರುವ ನಾಗರಿಕ ಹತ್ಯೆಗಳ ವಿರುದ್ಧ ಬುಧವಾರ ಜಮ್ಮುವಿನಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನು ಮುಂದಿನ ಆದೇಶದವರೆಗೆ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು India Today ವರದಿ ಮಾಡಿದೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೆಹಬೂಬಾ ಮುಫ್ತಿ ಅವರು ಮೃತ ನಾಗರಿಕರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿದರು.

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (ಎಎಫ್‌ಎಸ್‌ಪಿಎ) ಜಾರಿಯಲ್ಲಿದ್ದಾಗಿನಿಂದ ಅಮಾಯಕರ ಹತ್ಯೆಗಳಿಗೆ ಯಾವುದೇ ಹೊಣೆಗಾರಿಕೆ ಇಲ್ಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಸೋಮವಾರ ಸಂಜೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಾಗರಿಕರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

“ನಮ್ಮನ್ನು ಕೊಲ್ಲುವುದನ್ನು ನಿಲ್ಲಿಸಿ, ಹೈದರ್‌ಪೋರಾ ಹತ್ಯೆಗಳನ್ನು ತನಿಖೆ ಮಾಡಿ, ನಿರ್ಭಯವನ್ನು ಕೊನೆಗೊಳಿಸಿ ಮತ್ತು ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಿ” ಎಂಬ ಭಿತ್ತಿಪತ್ರಗಳನ್ನು ಹಿಡಿದು ಮೆಹಬೂಬಾ ಮುಫ್ತಿ ಅವರು ಪಕ್ಷದ ಕಾರ್ಯಕರ್ತರು ಹಾಗೂ  ಮುಖಂಡರೊಂದಿಗೆ ಪಕ್ಷದ ಗಾಂಧಿನಗರದ ಪ್ರಧಾನ ಕಚೇರಿಯ ಹೊರಗೆ ಈ ಹತ್ಯೆಗಳ ವಿರುದ್ಧ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News