ನಿವೃತ್ತ ಸೈನಿಕಗೆ ಸೇರಿದ ಜಾಗದಲ್ಲಿ ನಿರ್ಮಾಣಗೊಂಡ ಮನೆಗಳ ತೆರವು
Update: 2021-11-18 17:18 IST
ಪುತ್ತೂರು: ತಾಲೂಕಿನ ಮುಂಡೂರು ಗ್ರಾಮದ ಕೊಡಂಕಿರಿ ಎಂಬಲ್ಲಿ ನಿವೃತ್ತ ಸೈನಿಕರೊಬ್ಬರಿಗೆ ಸೇರಿದ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದ ನಾಲ್ಕು ಮನೆಗಳನ್ನು ಗುರುವಾರ ಅಧಿಕಾರಿಗಳು ತೆರವುಗೊಳಿಸಿದರು.
ನಿವೃತ್ತ ಸೈನಿಕ ಕಿಶೋರ್ ಎಂಬವರಿಗೆ ಕೊಡಂಕಿರಿಯಲ್ಲಿ 55 ಸೆಂಟ್ಸ್ ಜಾಗ ಮಂಜೂರುಗೊಂಡಿತ್ತು. ಈ ಜಾಗದಲ್ಲಿ 4 ಕುಟುಂಬಗಳು ಮನೆ ನಿರ್ಮಿಸಿಕೊಂಡು ವಾಸವಾಗಿದ್ದರು. ಈ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ರಮೇಶ್ ಬಾಬು ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಎಲ್ಲಾ ಮನೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಮನೆ ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಸಮೀಪದ ಸರ್ಕಾರಿ ಜಾಗದಲ್ಲಿ ತಲಾ 2.75 ಸೆಂಟ್ಸ್ ಜಾಗವನ್ನು ನೀಡಲಾಯಿತು. ಪುತ್ತೂರು ಗ್ರಾಮಾಂತರ ಠಾಣಾ ಎಸ್‍ಐ ಉದಯರವಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಮುಂಡೂರು ಗ್ರಾಮಕರಣಿಕೆ ತುಳಸಿ ಉಪಸ್ಥಿತರಿದ್ದರು.