ಎಂಸಿಎ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ
Update: 2021-11-18 19:28 IST
ಮಂಗಳೂರು : ಸರ್ಕಾರದ ಜಾಹೀರಾತು ಸಂಸ್ಥೆಯಾದ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಕಂಪನಿಯು 2020-21ನೇ ಸಾಲಿನ ತನ್ನ ಲಾಭಾಂಶದಿಂದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿಗಳ ದೇಣಿಗೆ ನೀಡಿದೆ.
ಕೋವಿಡ್-19ರ ಸೋಂಕಿನಿಂದ ಕಳೆದ ಸಾಲಿನಲ್ಲಿ ವ್ಯವಹಾರಗಳು ತಟಸ್ಥವಾಗಿದ್ದ ಪರಿಸ್ಥಿತಿ ಎಲ್ಲರಿಗೂ ತಿಳಿದಿರುವುದೇ. ಆದರೂ ಕಂಪನಿ ತನ್ನ ಪರಿಶ್ರಮ ಮತ್ತು ಸಮರ್ಪಿತ ಸೇವೆಯಿಂದ ಲಾಭ ಗಳಿಕೆಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಕಂಪನಿಯ ಅಧ್ಯಕ್ಷ ಸಿ. ಮುನಿಕೃಷ್ಣ ನೇತೃತ್ವದಲ್ಲಿ ಮತ್ತು ನಿರ್ದೇಶಕರುಗಳಾದ ಎಚ್.ಆರ್. ತೀರ್ಥಲಿಂಗಪ್ಪ ಮತ್ತು ವೀರೇಶ್ ಸಂಗಳದ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸಿದ್ದಲಿಂಗಪ್ಪ ಬಿ. ಪೂಜಾರಿ ಉಪಸ್ಥಿತಿಯಲ್ಲಿ ಚೆಕ್ ನೀಡಲಾಯಿತು.