×
Ad

ವೇತನ ನೀಡಲು ವಿಳಂಬ ಆರೋಪ; ಹೆಜಮಾಡಿ ಟೋಲ್‍ನಲ್ಲಿ ಪ್ರತಿಭಟನೆ

Update: 2021-11-18 19:31 IST

ಪಡುಬಿದ್ರಿ: ನವಯುಗ್ ಟೋಲ್ ಪ್ಲಾಝಾದ ಗುತ್ತಿಗೆ ಕಾರ್ಮಿಕರು ತಮಗೆ ವೇತನ ನೀಡಿಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ  ದಿಢೀರ್ ಮುಷ್ಕರ ಆರಂಭಿಸಿದ ಘಟನೆ ಗುರುವಾರ ನಡೆಸಿತು.

ಟಿಬಿಆರ್ ಗುತ್ತಿಗೆ ಕಂಪನಿ ಮೂಲಕ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿ ತಿಂಗಳ 10ನೇ ತಾರೀಕಿಗೆ ಕಾರ್ಮಿಕರಿಗೆ ವೇತನ ಪಾವತಿಯಾಗುತ್ತದೆ. ಆದರೆ ಈ ಬಾರಿ 18 ದಿನ ಕಳೆದರೂ ವೇತನ ಪಾವತಿಸಲಿ.  ಈ ಬಗ್ಗೆ ಕಾರ್ಮಿಕರು ವೇತನಕ್ಕಾಗಿ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ 17ರೊಳಗೆ ವೇತನ ಪಾವತಿ ಗಡುವು ನೀಡಿತ್ತು. ಆದರೂ 18ರ ಬಳಿಕವೂ ವೇತನ ಪಾವತಿಯಾಗದ ಕಾರಣ ಬೆಳಿಗ್ಗೆ 8 ಗಂಟೆಯಿಂದ ಸುಮಾರು 97 ಕಾರ್ಮಿಕರು ವೇತನ ಪಾವತಿ ವಿಳಂಬ ವಿರೋಧಿಸಿ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಿದರು. 

ಟಿಬಿಆರ್ ಕಂಪನಿಯು ಕಾರ್ಮಿಕರಿಗೆ ಕಳೆದ 7 ತಿಂಗಳಿಂದ ಪಿಎಫ್ ಹಣ ನೀಡದೆ ಸತಾಯಿಸುತ್ತಿದೆ ಎಂದೂ ಕಾರ್ಮಿಕರು ಆರೋಪಿಸಿದ್ದಾರೆ. ನವಯುಗ್ ಕಂಪನಿಯು ಮಧ್ಯ ಪ್ರವೇಶಿಸಿ ವೇತನ ಪಾವತಿಗೆ ಮಾತುಕತೆ ನಡೆಸಿದೆ. ಈತನ್ಮಧ್ಯೆ ಟಿಬಿಆರ್ ಕಂಪನಿಯು ತಕ್ಷಣದಿಂದ ಕೆಲವೊಂದು ಕಾರ್ಮಿಕರಿಗೆ ವೇತನ ನೀಡಲು ಆರಂಭಿಸಿದೆ. ಆದರೆ ಸಂಜೆವರೆಗೂ ಎಲ್ಲಾ ಕಾರ್ಮಿಕರಿಗೆ ವೇತನ ಪಾವತಿಸಲು ವಿಫಲವಾಗಿದೆ. ಹಾಗಾಗಿ ಸಂಜೆವರೆಗೂ ಮುಷ್ಕರ ಮುಂದುವರಿದಿದೆ.

ಮುಷ್ಕರದಿಂದ ನಷ್ಟ: ಗುರುವಾರ ನಡೆದ ಮುಷ್ಕದ ಸಮಯದಲ್ಲಿ ಟೋಲ್‍ನ ಎರಡೂ ಬದಿಗಳಲ್ಲಿ ವಾಹನಗಳು ಟೋಲ್ ರಹಿತವಾಗಿ ಸಂಚರಿಸಿವೆ. ಫಾಸ್ಟ್ ಟ್ಯಾಗ್ ಇದ್ದು, ಟೋಲ್ ಫ್ಲಾಝಾ ಸ್ಕ್ಯಾನ್ ಮಾಡಿದಲ್ಲಿ ಮಾತ್ರ ಹಣ ಸಂದಾಯವಾಗಿದೆ. ಸ್ಕ್ಯಾನ್ ಆಗದಿರುವ, ಫಾಸ್ಟ್ ಟ್ಯಾಗ್‍ನಲ್ಲಿ ಸೂಕ್ತ ಹಣವಿಲ್ಲದ ವಾಹನಗಳಿಂದ, ಹಾಗೂ ಫಾಸ್ಟ್ ಟ್ಯಾಗ್ ರಹಿತ ವಾಹನಗಳು ಯಾವುದೇ ಹಣ ಪಾವತಿಸದೆ ಸಂಜೆವರೆಗೂ ತೆರಳಿದೆ. ಇದರಿಂದ ನವಯುಗ್ ಕಂಪನಿಗೆ 3.5 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News