ಹೇಮ ಮಾಲಿನಿ, ಪ್ರಸೂನ್ ಜೋಷಿಗೆ ‘ವರ್ಷದ ಭಾರತೀಯ ವ್ಯಕ್ತಿ’ ಪ್ರಶಸ್ತಿ
Update: 2021-11-18 19:52 IST
ಹೊಸದಿಲ್ಲಿ, ನ. 17: ನಟಿ, ರಾಜಕಾರಣಿ ಹೇಮಾ ಮಾಲಿನಿ ಹಾಗೂ ಸಿಬಿಎಫ್‌ಸಿಯ ಅಧ್ಯಕ್ಷ ಪ್ರಸೂನ್ ಜೋಷಿ ಅವರಿಗೆ ‘ವರ್ಷದ ಭಾರತೀಯ ವ್ಯಕ್ತಿ’ ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಗುರುವಾರ ಘೋಷಿಸಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಗೋವಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ‘ಭಾರತದ ಚಿತ್ರೋತ್ಸವ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ