ಸೆವೆನ್ ಸ್ಟಾರ್ ಸ್ಪೋರ್ಟಿಂಗ್ ಕ್ಲಬ್ ಅಧ್ಯಕ್ಷರಾಗಿ ರಿಝ್ವಾನ್ ಬಾಪ್ನಡ್ ಆಯ್ಕೆ

Update: 2021-11-18 14:34 GMT
ರಿಝ್ವಾನ್ ಬಾಪ್ನಡ್

ಮುಲ್ಕಿ, ನ.18: ಸೆವೆನ್ ಸ್ಟಾರ್ ಸ್ಪೋರ್ಟಿಂಗ್ ಕ್ಲಬ್ ಕಾರ್ನಾಡ್ ಇದರ 2020-21ರ ಸಾಲಿನ ವಾರ್ಷಿಕ ಮಹಾಸಭೆಯು ಕಾರ್ನಾಡಿನ ಸಮುದಾಯ ಭವನ ಕಾರ್ನಾಡುವಿನಲ್ಲಿ ಮಾಜಿ ವಾಯುಪಡೆಯ ಯೋಧ ಎಂ.ಬಿ. ಖಾನ್ ಸಾಹೇಬ್‌ರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಲೆಕ್ಕ ಪತ್ರ ಹಾಗೂ ವಾರ್ಷಿಕ ವರದಿ ಮಂಡಿಸಿದ ನಂತರ ನೂತನ 2021-22ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ಅಧ್ಯಕ್ಷರಾಗಿ ಎಂ. ರಿಝ್ವಾನ್ ಬಾಪ್ನಡ್, ಗೌರವ ಅಧ್ಯಕ್ಷರಾಗಿ ಎಂ.ಬಿ.ಖಾನ್, ಪುತ್ತುಬಾವ, ಉಪಾಧ್ಯಕ್ಷರಾಗಿ ರಿಯಾಝ್ ಎಚ್. ಕಾರ್ನಾಡ್ ಹಾಗೂ ನಿತಿನ್ ಜಿ. ಮುಲ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್ ಪ್ರಸಾದ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಸುಹೈಲ್, ಖಜಾಂಜಿಯಾಗಿ ರಿಝ್ವಿನ್ ಸುಲೈಮಾನ್, ಸಲಹೆಗಾರರಾಗಿ ಕೆ.ಎಂ. ಖಾದರ್ ಅವರನ್ನು ಆಯ್ಕೆಯಾದರು.

ಸಮಿತಿಯ ಸದಸ್ಯರಾಗಿ ನಾಸೀರ್ ಕಲ್ಪಂಡೆ, ಎ.ಕೆ. ಅಶ್ರಫ್ ಮುಲ್ಕಿ, ಹಕೀಮ್ ಮುಲ್ಕಿ, ರಹಿಮಾನ್, ಶರೀಫ್ ಎಂ.ಎ, ರಿಯಾಝ್ ಕೊಳ್ನಾಡ್, ಅಸ್ಲಾಂ, ಸಮೀರ್ ಕಿಲ್ಪಾಡಿ, ಇಸ್ಮಾಯೀಲ್, ಇರ್ಷಾದ್, ರಹೀಮ್ ಮಿನ್ಹಲ್, ಸಿರಾಜ್ ಆಯ್ಕೆಯಾಗಿದ್ದಾರೆ.

ಗಲ್ಫ್ ರಾಷ್ಟ್ರಗಳ ಪ್ರತಿನಿಧಿಗಳಾಗಿ ದುಬೈಯಿಂದ ನಿಖಿಲ್ ಜಿ. ಮುಲ್ಕಿ, ಮಸ್ಕತ್‌ನಿಂದ ಮೋಹನ್ ಕುಮಾರ್, ಸೌದಿ ಅರೇಬಿಯಾದಿಂದ ಮನ್ಸೂರ್ ರಿಯಾದ್, ಬಹರೈನ್‌ನಿಂದ ಶಮೀಮ್ ಅಕ್ತರ್, ಸಾಹುಲ್ ಹಮೀದ್ ನೇಮಕಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News