ಮೋದಿ ಹೊಗಳಿರುವ ಪ್ರಮೋದ್ ಹೇಳಿಕೆ ವೈಯಕ್ತಿಕವೇ ಹೊರತು ಪಕ್ಷದಲ್ಲ: ಅಶೋಕ್ ಕುಮಾರ್
ಉಡುಪಿ, ನ.18: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಇತ್ತೀಚೆಗೆ ಪೇಜಾವರ ಸ್ವಾಮೀಜಿಗೆ ದೊರೆತ ಪದ್ಮವಿಭೂಷಣ ಪ್ರಶಸ್ತಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮೋದಿಯನ್ನು ಹೊಗಳಿರುವುದು ಅಕಸ್ಮಿಕವಾಗಿ ಆಗಿರ ಬಹುದು. ಅದು ಅವರ ವೈಯಕ್ತಿಕ ಹೇಳಿಕೆಯೇ ಹೊರತು ಪಕ್ಷದ ಅಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪದ್ಮ ಪ್ರಶಸ್ತಿಗೆ ಈ ಹಿಂದೆ ಕೂಡ ಈಗಿನ ರೀತಿಯಲ್ಲೇ ಆಯ್ಕೆ ಮಾಡಲಾ ಗುತ್ತಿತ್ತು. ಅರ್ಜಿ ಹಾಕಬೇಕಾಗಿಯೂ ಇರಲಿಲ್ಲ. ಜನರ ಸಾಧನೆಯನ್ನು ಶಿಫಾರಸ್ಸು ಮಾಡುವ ವ್ಯವಸ್ಥೆ ಕೂಡ ಇತ್ತು ಎಂದರು.
ಪ್ರಮೋದ್ ಹಲವು ಪ್ರತಿಭಟನೆಯಲ್ಲಿ ಮೋದಿಯನ್ನು ಟೀಕೆ ಕೂಡ ಮಾಡಿ ದ್ದರು. ಈಗ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಸುಮ್ಮನೆ ವಿವಾದ ಮಾಡಿ ಗೊಂದಲದ ವಾತಾವಾರಣ ಸೃಷ್ಠಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪ್ರಮೋದ್ ಸೋತ ನಂತರ ಕೆಲವೊಂದು ವ್ಯಾತ್ಯಾಸಗಳು ಆಗಿರಬಹುದು. ಆದರೂ ಅವರು ಕಾಂಗ್ರೆಸ್ ನಾಯಕರಾಗಿ ಪಕ್ಷಕ್ಕೆ ಇಂದಿಗೂ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಉಡುಪಿ ಜಿಲ್ಲೆಯ ಶ್ಯಾಮಲಾ ಭಂಡಾರಿ, ಮಂಜುನಾಥ್ ಪೂಜಾರಿ, ಯು.ಬಿ.ಶೆಟ್ಟಿ ಹಾಗೂ ಭುಜಂಗ ಶೆಟ್ಟಿ ಹಾಗೂ ದ.ಕ. ಜಿಲ್ಲೆಯ 8 ಮಂದಿ ಆಕಾಂಕ್ಷಿಗಳಾಗಿದ್ದು, ಅಂತಿಮ ವಾಗಿ ಹೈಕಮಾಂಡ್ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ 150 ಮತಗಳ ಕೊರತೆ ಆಗಲಿದ್ದು, ರಾಜೇಂದ್ರ ಕುಮಾರ್ ಅಭ್ಯರ್ಥಿಯಾಗಿ ಆಯ್ಕೆಯಾದರೆ ಗೆಲ್ಲುವುದು ಕಷ್ಟ ಕೆಲಸ ಆಗಲ್ಲ. ಈ ಹಿಂದೆ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ರಾಜೇಂದ್ರ ಕುಮಾರ್, ಈಗ ಪಕ್ಷದಲ್ಲಿ ಸಕ್ರಿಯರಾಗಿ ಇಲ್ಲದಿದ್ದರೂ ಒಡನಾಟದಲ್ಲಿ ಇದ್ದಾರೆ. ಈಗಾಗಲೇ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿರುವ ಅವರ ಬಗ್ಗೆ, ಹೈಕಮಾಂಡ್ ನಿರ್ಧಾರ ತೆಗೆದು ಕೊಳ್ಳಲಿದೆ ಎಂದು ಅವರು ತಿಳಿಸಿದರು.