ಬೈಕ್ ಕಳವು : ದೂರು
Update: 2021-11-18 22:31 IST
ಮಂಗಳೂರು, ನ.18: ನಗರದ ಕದ್ರಿಕಂಬ್ಳ ರಸ್ತೆಯ ವಸತಿ ಸಂಕೀರ್ಣವೊಂದರ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಬೈಕ್‌ನ್ನು ಕಳವು ಮಾಡಿರುವ ಬಗ್ಗೆ ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ.
ಅ.19ರಂದು ಮಧ್ಯಾಹ್ನ 12 ಗಂಟೆಗೆ ಪಾರ್ಕಿಂಗ್ ಮಾಡಲಾಗಿದ್ದ ಬೈಕ್ ಅ.20ರಂದು ಬೆಳಗ್ಗೆ 10 ಗಂಟೆಗೆ ನೋಡಿದಾಗ ಕಳವಾಗಿರುವುದು ಗಮನಕ್ಕೆ ಬಂದಿದೆ ಎಂದು ನಿತೇಶ್ ದೂರು ನೀಡಿದ್ದಾರೆ.