ಕೆಟ್ಟ ದಾರಿ ಆಯ್ಕೆ ಮಾಡದೇ ಬದುಕಿಗೆ ಉತ್ತಮ ದಾರಿ ಕಂಡುಕೊಳ್ಳಿ: ಉಳ್ಳಾಲ ಠಾಣೆ ಇನ್ ಸ್ಪೆಕ್ಟರ್ ಸಂದೀಪ್

Update: 2021-11-18 17:05 GMT

ಉಳ್ಳಾಲ: ಪಾಸ್ ಪೋರ್ಟ್, ಇನ್ನಿತರ ಅಗತ್ಯ ಕೆಲಸ ಇದ್ದರೆ ಮಾತ್ರ ಠಾಣೆಗೆ ಬನ್ನಿ‌. ಗಲಾಟೆ, ಕಳ್ಳತನ ಮಾಡಿ ಠಾಣೆಗೆ ಹಾಜರಾಗಲು ಬಯಸಬೇಡಿ. ನೀವು ಮುಂದೆ ಏನಾಗಬೇಕು ಎಂಬುದನ್ನು ನಿಮ್ಮ ಶಿಕ್ಷಣ ನಿರ್ಧರಿಸುತ್ತದೆ. ಕೆಟ್ಟ ದಾರಿ ಆಯ್ಕೆ ಮಾಡದೇ ಬದುಕಿಗೆ ಉತ್ತಮ ದಾರಿ ಕಂಡುಕೊಳ್ಳಿ ಎಂದು ಉಳ್ಳಾಲ ಠಾಣೆ ಇನ್ ಸ್ಪೆಕ್ಟರ್ ಸಂದೀಪ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು  ಜಿಲ್ಲಾ ಮಕ್ಕಳ ಮಾಸೋತ್ಸವ ಸಮಿತಿ, ಶಿಕ್ಷಣ ಸಂಪನ್ಮೂಲ ಕೇಂದ್ರ ಗಳ ಒಕ್ಕೂಟ ಇದರ ಆಶ್ರಯದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರ ಮಂಗಳೂರು ಇದರ ನೇತೃತ್ವ ದಲ್ಲಿ ಉಳ್ಳಾಲ ಪೊಲೀಸ್ ಠಾಣೆ ಹಾಗೂ ಮಕ್ಕಳ ಸ್ನೇಹಿ ಉಳ್ಳಾಲ ಇದರ ಸಹಕಾರದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ 2021ರ ಅಂಗವಾಗಿ ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದ ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಪ್ರಯುಕ್ತ ನಡೆದ ವಿದ್ಯಾರ್ಥಿಗಳ ರ್ಯಾಲಿ ಯನ್ನು ‌ಪೌರಾಯುಕ್ತ ರಾಯಪ್ಪ  ಉದ್ಘಾಟಿಸಿ ದರು. ಕಾರ್ಯಕ್ರಮದಲ್ಲಿ  ಮಕ್ಕಳ ಹಕ್ಕುಗಳ ಮಾಸೋತ್ಸವ ಜಿಲ್ಲಾ ಸಂಚಾಲಕ ಮಂಜು ವಿಟ್ಲ, ಶಿಕ್ಷಣ ಸಂಪನ್ಮೂಲ ಕೇಂದ್ರ ಮಂಗಳೂರು ಇದರ ಅಧ್ಯಕ್ಷ ಆಶಾಲತಾ ಸುವರ್ಣ, ಕಾರ್ಯ ದರ್ಶಿ ಮಂಗಳೂರು ರಿಯಾಝ್, ಸದಸ್ಯ ನಂದ ಪಾಯಸ್, ಪ್ರದೀಪ್, ರೆನಿಡಿ ಸೋಜ, ಕಮಲಗೌಡ ಸ್ವಾಗತಿಸಿ, ನಿರೂಪಿಸಿದರು. ಉಷಾ ನಾಯಕ್ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News