ಮಂಗಳೂರು: 1.92 ಕೋಟಿ ರೂ. ಮೌಲ್ಯದ ಅಮಾನ್ಯ ನೋಟು ಪತ್ತೆ

Update: 2021-11-19 07:23 GMT

ಮಂಗಳೂರು, ನ.19: ಕೇಂದ್ರ ಸರಕಾರ ಅಮಾನ್ಯ ಮಾಡಿರುವ ಒಂದು ಸಾವಿರ ಹಾಗೂ ಐನೂರು ರೂ. ಮುಖಬೆಲೆಯ 1.92 ಕೋಟಿ ರೂ. ಮೌಲ್ಯದ ಅಮಾನ್ಯ ನೋಟುಗಳ ಸಾಗಾಟ ಪತ್ತೆ ಹಚ್ಚಿದ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ನಗರದ ಲಾಲ್ ಬಾಗ್ ಬಳಿ ಗುರುವಾರ ಬಂಧಿಸಿದ್ದಾರೆ.

ಕಣ್ಣೂರು ಬೋರುಗುಡ್ಡೆ ನಿವಾಸಿ ಝುಬೈರ್ ಹಮ್ಮಬ್ಬ(52) ಪಡೀಲ್ ವೀರನಗರ ನಿವಾಸಿ ದೀಪಕ್ ಕುಮಾರ್(32) ಹಾಗೂ ಬಜ್ಪೆ ನಿವಾಸಿ ಅಬ್ದುಲ್ ನಾಸಿರ್ ಬಂಧಿತ ಆರೋಪಿಗಳಾಗಿದ್ದಾರೆ.

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ . ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.  

ಬಂಧಿತರಿಂದ ಒಂದು ಸಾವಿರ ಮುಖಬೆಲೆಯ 50 ಲಕ್ಷ ರೂ. ಹಾಗೂ 500 ಮುಖ ಬೆಲೆಯ 1 ಕೋಟಿ ಐವತ್ತು ಲಕ್ಷದ ಐವತ್ತು ಸಾವಿರ ರೂ.ನ ಅಮಾನ್ಯಗೊಂಡ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.

ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಬರ್ಕೆ ಪೊಲೀಸರು ಗುರುವಾರ ತನಿಖೆ ನಡೆಸುತ್ತಿದ್ದಾಗ ಈ ಹಣ ಪತ್ತೆಯಾಗಿದೆ. ಖಚಿತ ಮಾಹಿತಿಯನ್ನು ಆಧರಿಸಿ ನಗರದ ಲಾಲ್ ಬಾಗ್ ಪರಿಸರದಲ್ಲಿ ಕಾರೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಹಣ, ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಮಿಶನರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ಎಸಿಪಿ ಪಿ.ಎ. ಹೆಗಡೆ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News