ಮಾಯಾವತಿಗೆ ಅವಮಾನ ಆರೋಪ: ಕಾಮಿಡಿಯನ್ ವೀರ್ ದಾಸ್ ವಿರುದ್ಧ ದೂರು ನೀಡಿದ ಭೀಮ್ ಆರ್ಮಿ ನಾಯಕ

Update: 2021-11-19 09:05 GMT

ಹೊಸದಿಲ್ಲಿ: ಬಹುಜನ್ ಸಮಾಜ್ ಪಕ್ಷದ ಮುಖ್ಯಸ್ಥೆ ಮಾಯಾವತಿ ಕುರಿಂತೆ ಕಾಮಿಡಿಯನ್ ವೀರ್ ದಾಸ್ ಅವರು  ನೀಡಿದ ಹೇಳಿಕೆಯೊಂದನ್ನು ವಿರೋಧಿಸಿ  ಭೀಮ್ ಆರ್ಮಿ ಪ್ರಧಾನ ಕಾರ್ಯದರ್ಶಿ ಕನಿಷ್ಕ್ ಸಿಂಗ್ ಎಂಬವರು ದೂರು ನೀಡಿದ್ದಾರೆ.

ವೀರ್ ದಾಸ್ ಅವರ ಹೇಳಿಕೆ "ಅಶ್ಲೀಲ, ಆಕ್ಷೇಪಾರ್ಹ ಮತ್ತು ಅವಮಾನಕರ"ವಾಗಿದೆ ಎಂದು ಸಿಂಗ್ ತಮ್ಮ ದೂರಿನಲ್ಲಿ ಹೇಳಿದ್ದಾರಲ್ಲದೆ ಮಾಯಾವತಿ ಅವರು ಪರಿಶಿಷ್ಟ ಜಾತಿಗೆ ಸೇರಿದ ಸ್ಫೂರ್ತಿದಾಯಕ ವ್ಯಕ್ತಿತ್ವ ಎಂದು ತಿಳಿದಿದ್ದರೂ ಅವರ  ಘನತೆಯನ್ನು ತಗ್ಗಿಸುವ  ಉದ್ದೇಶದಿಂದ ಇಂತಹ ಹೇಳಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪರಿಶಿಷ್ಟ ಜಾತಿಯನ್ನು ಅವಮಾನಿಸುವ ಉದ್ದೇಶದಿಂದಲೇ ಈ ಹೇಳಿಕೆಯ ವೀಡಿಯೋ ಮಾಡಲಾಗಿದೆ ಹಾಗೂ ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಪಂಗಡಗಳ ವಿರುದ್ಧದ ದೌರ್ಜನ್ಯ ನಿಗ್ರಹ ಕಾಯಿದೆಯಡಿ ಎಫ್‍ಐಆರ್ ದಾಖಲಸಿಬೇಕೆಂದು ದೂರುದಾರರು ಮಾಡಿದ್ದಾರೆ.

"ನಾನು ಮಾಯಾವತಿ ಅವರನ್ನು ದ್ವೇಷಿಸುವುದಿಲ್ಲ, ಏಕೆಂದರೆ ಅವರು ಪುರುಷರಂತೆ ಕಾಣುತ್ತಾರೆ, ನಾನು ಮಾಯಾವತಿಯನ್ನು ದ್ವೇಷಿಸುವುದಿಲ್ಲ ಏಕೆಂದರೆ ಆಕೆ ಉತ್ತರ ಪ್ರದೇಶಿ  ಶೈಲಿಯಲ್ಲಿ ಮಾತನಾಡುವ ಪೆಂಗ್ವಿನ್ ನಂತೆ ಕಾಣುತ್ತಾರೆ.   ಎಲ್ಲೋ ಮಾಯಾವತಿಯನ್ನು ಹಣದ ಹಾರ ಹಾಕಿಕೊಂಡು ನಾನು ನೋಡಿದ್ದೇನೆ ಇದಕ್ಕಾಗಿ ನಾನು ಮಾಯಾವತಿಯನ್ನು ದ್ವೇಷಿಸುತ್ತೇನೆ" ಎಂದು ವಿವಾದಿತ ವೀಡಿಯೋದಲ್ಲಿ ವೀರ್ ದಾಸ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News