ನ.24ರಂದು ಚಪ್ಪರ ಶ್ರೀ ವೆಂಕಟರಮಣ ದೇಗುಲದ ಲಕ್ಷ ದೀಪೋತ್ಸವ
Update: 2021-11-19 15:52 IST
ಕಾರ್ಕಳ, ನ.19: ಚಪ್ಪರ ಶ್ರೀ ಶ್ರೀನಿವಾಸ ಹಾಗೂ ಶ್ರೀ ವೆಂಕಟರಮಣ ದೇವರ ಲಕ್ಷ ದೀಪೋತ್ಸವವು ನ.24ರಂದು ನಡೆಯಲಿದೆ. ಅಂದು ಬೆಳಗ್ಗೆ 9:30ರ ವೇಳೆ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಪಟ್ಟದ ದೇವರಾದ ಶ್ರೀ ಶ್ರೀನಿವಾಸ ಹಾಗೂ ಶ್ರೀ ವೆಂಕಟರಮಣ ದೇವರ ಉತ್ಸವವು ಜರುಗಲಿದೆ. ಬಳಿಕ ಸಾರ್ವಜನಿಕ ಅನ್ನಸಂಪರ್ಪಣೆ ನಡೆಯಲಿದೆ.
ಅಂದು ರಾತ್ರಿ 8 ಗಂಟೆಗೆ ಉತ್ಸವದಲ್ಲಿ ಮಣ್ಣಗೋಪುರ ಸಾಗಲಿದೆ ರಾತ್ರಿ 12ರ ಸಮಯ ಮಣ್ಣಗೋಪುರದಿಂದ ಪಟ್ಟದ ದೇವರು ರಥದಲ್ಲಿ ಹಾಗೂ ಶ್ರೀನಿವಾಸ ದೇವರು ಪಲ್ಲಕ್ಕಿಯಲ್ಲಿ ದೇಗುಲ ತಲುಪುವರು. ಈ ವೇಳೆ ರಥಬೀದಿಯಲ್ಲಿರುವ ಎಲ್ಲ ಗುರ್ಜಿ ಮಂಟಪದಲ್ಲಿ ಸೇವೆ ನಡೆಯಲಿದೆ.
ನ. 25ರಂದು ಅವಭ್ರತ ಸ್ನಾನ
ನ.25ರಂದು ಅವಭೃತ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ದೇವರು ಪಲ್ಲಕ್ಕಿಯಲ್ಲಿ ರಥಬೀದಿಯಾಗಿ ರಾಮಸಮುದ್ರ ತೆರಳಿ ಅವಭೃತ ಸ್ನಾನಗೈಯಲಿದ್ದಾರೆ. ಈ ವೇಳೆ ಜಿಎಸ್‌ಬಿ ಸಮಾಜ ಬಾಂಧವರು ಓಕುಳಿ ಹಚ್ಚಿ ಸಂಭ್ರಮಿಸುತ್ತಾರೆ.