ಮಂಜನಾಡಿ ಯುವ ಕಾಂಗ್ರೆಸ್ ಗ್ರಾಮ ಸಮಿತಿಯಿಂದ ಪದ್ಮಶ್ರೀ ಪುರಸ್ಕೃತ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮ

Update: 2021-11-19 16:04 GMT

ಮಂಜನಾಡಿ : ಮಂಜನಾಡಿ ಗ್ರಾಮ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಯು.ಟಿ ಖಾದರ್ ಹಾಜಬ್ಬ ಅವರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು "ಸಣ್ಣ ವ್ಯಾಪಾರ ಮಾಡುವಾಗಲೇ ಶಿಕ್ಷಣದ ಕಡೆ ಒತ್ತು ನೀಡಿದ್ದ ಹಾಜಬ್ಬರವರು ಶಾಲೆಯ ಮಕ್ಕಳ ಬೆಳವಣಿಗೆಗೆ ಮಾಡಿದ ಸಾಧನೆ ಈಗ ದೇಶಕ್ಕೆ ಮಾದರಿಯಾಗಿದೆ. ಅವರನ್ನು ದೇಶವೇ ಗುರುತಿಸಿ ಸನ್ಮಾನ ಮಾಡಿದೆ ಎಂದರು" 

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಜಬ್ಬ ರವರು " ಸನ್ಮಾನಕ್ಕಾಗಿ ನಾನು ಕೆಲಸ ಮಾಡಿಲ್ಲ. ನಮ್ಮೂರಲ್ಲಿ ಶಿಕ್ಷಣ ವ್ಯವಸ್ಥೆ ಬೇಕು ಎಂಬ ಗುರಿ ಇತ್ತು. ಇದಕ್ಕೆ ಮಂಜನಾಡಿ ಗ್ರಾಮದ ಜನರು ಕೂಡ ಸಹಕಾರ ಮಾಡಿದ್ದಾರೆ. ಐದು ದಶಕದ ಹಿಂದೆಯೇ ಇಲ್ಲಿನ ಜನರ ಪರಿಚಯ ನನಗಿತ್ತು." ಎಂದರು

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್. ಎಸ್. ಕರೀಂ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ, ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪಿರೋಝ್ ಮಲಾರ್,   ಉಳ್ಳಾಲ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಿಕಾ ರೈ, ಮಂಜನಾಡಿ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಮೀದ್ ಮದ್ಪಾಡಿ ಮಂಜನಾಡಿ ಗ್ರಾಮ ಯುವ ಕಾಂಗ್ರೆಸ್ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್, ನೆಲ್ಲಿ ಫರ್ನಾಂಡಿಸ್ ಹಾಜಬ್ಬರ ಶೈಕ್ಷಣಿಕ ಸೇವೆಯನ್ನು ಸ್ಮರಿಸಿ ಮಾತನಾಡಿದರು.

ಮಂಜನಾಡಿ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಫಾ ,ಕೋಶಾಧಿಕಾರಿ ಮುಸ್ತಫ, ಉಪಾಧ್ಯಕ್ಷ ನಾಸಿರ್ ಮೈಸೂರು, ನಝೀರ್ ಮದ್ಪಾಡಿ, ನಿಝಾರ್, ಸಫ್ವಾನ್ ಮಂಗಳ ನಗರ, ಮುಝಮ್ಮಿಲ್ ಕಲ್ಕಟ್ಟ, ಆಸಿಫ್ ಮಂಜನಾಡಿ  ಸನ್ಮಾನ ಸಮಾರಂಭ ನೆರೆವೇರಿಸಿಕೊಟ್ಟರು.

ಕರ್ನಾಟಕ ಮುಸ್ಲಿಂ ಜಮಾಅತ್ ಉಳ್ಳಾಲ ಸಮಿತಿ ಅಧ್ಯಕ್ಷ ಆಲಿಕುಂಞಿ ಪಾರೆ, ಮಂಜನಾಡಿ ಗ್ರಾಮ ಕಾಂಗ್ರೆಸ್ ನಾಯಕರಾದ ಮಂಜನಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿನ್ಸೆಂಟ್ ವೇಗಸ್ ಎಂ. ಎಚ್ ಅಯ್ಯುಬ್ ಬಾವು ಮುಂಬೈ , ಕುಂಞಿಬಾವ ಕಲ್ಕಟ್ಟ, ಬಶೀರ್ ಮಂಜನಾಡಿ, 
ಇಸ್ಮಾಯಿಲ್ ಸಾಯಿಬಾಕ, ನೆಕ್ಕೆರೆ ಬಾವು, ಅಶ್ರಫ್ ಮಾರಾಟಿ ಮೂಲೆ, ಮೋನು ಕಲ್ಕಟ್ಟನಾಸಿರ್ ಸಾಮಣಿಗೆ, ಹಮೀದ್ ಸಹರ, ಜಮೀಲ್, ಅಶ್ರಫ್ ಅಚ್ಚು ಮಂಗಳ ನಗರ, ಪಿಲಿಪ್ ಡಿಸೋಜ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ  ಬಾವು ಮಾರಾಠಿ ಮೂಲೆ, ಅತ್ತಾವುಲ್ಲ ಪರ್ತಿಪ್ಪಾಡಿ, ಬಾವು ಮಂಗಳಾಂತಿ, ಬಶೀರ್ ಮಂಜನಾಡಿ, ಅಬ್ಬಾಸ್ ನಾಟೆಕಲ್, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ ಆಂಟೋನಿ ಮಸ್ಕರೇನ್ಹಾಸ್ ಮತ್ತು ನೆಲ್ಲಿ ಫರ್ನಾಂಡಿಸ್ ಅವರಿಗೆ ಯುವ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News