ದ.ಕ.ಜಿಲ್ಲೆ: ಕೋವಿಡ್ ಸೋಂಕಿನ 12 ಪ್ರಕರಣ ಪತ್ತೆ

Update: 2021-11-19 16:10 GMT

ಮಂಗಳೂರು, ನ.19: ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ ಸೋಂಕಿನ 12 ಪಾಸಿಟಿವ್ ಪ್ರಕರಣದೊಂದಿಗೆ ಶೇ.0.24 ಪಾಸಿಟಿವ್ ದರ ದಾಖಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 21,91,101 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 20,80,383 ನೆಗೆಟವ್ ಮತ್ತು 1,15,718 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಶುಕ್ರವಾರ 14 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಳ್ಳುವುದರೊಂದಿಗೆ ಈವರೆಗೆ 1,13,919 ಮಂದಿ ಬಿಡುಗಡೆಗೊಂಡಂತಾಗಿದೆ. ಈವರೆಗೆ 1694 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಸದ್ಯ 107 ಸಕ್ರಿಯ ಪ್ರಕರಣವಿದೆ.

ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 88,790 ಪ್ರಕರಣ ದಾಖಲಿಸಿ, 1,07,71,870 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News