ಕೃಷಿ ಕಾಯ್ದೆಗಳ ವಾಪಸ್‌ಗೆ ಸಿಪಿಐ, ಎಐಟಿಯುಸಿ ಹರ್ಷ
Update: 2021-11-19 21:41 IST
ಮಂಗಳೂರು, ನ.19: ಕೇಂದ್ರ ಸರಕಾರ ಹೊರಡಿಸಿದ್ದ ರೈತರಿಗೆ ಸಂಬಂಧಿಸಿದ್ದ ಮೂರು ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬೇಷರತ್ತಾಗಿ ವಾಪಸ್ ಪಡೆದಿರುವುದನ್ನು ಸಿಪಿಐ, ಎಐಟಿಯುಸಿ ಹರ್ಷ ವ್ಯಕ್ತಪಡಿಸಿದೆ.
ಈ ಕಾನೂನುಗಳ ಬಗ್ಗೆ ಸಮರ್ಪಕ ಚರ್ಚೆ ಇಲ್ಲದೆ, ಸರಕಾರಕ್ಕೆ ಬಹುಮತ ಇದೆ ಎಂಬ ದುರಹಂಕಾರದಿಂದ ಕಾಯ್ದೆ ರೂಪಿಸಲಾಗಿತ್ತು. ಆದರೆ ರೈತ ಸಂಘಟನೆಗಳು ಐಕ್ಯತಾ ವೇದಿಕೆಯ ಮೂಲಕ ಮಾಡು ಇಲ್ಲವೆ ಮಡಿ ಹೋರಾಟ ನಡೆಸಿದುದರ ಪರಿಣಾಮ ದಿಕ್ಕು ಕಾಣದಂತಾದ ಕೇಂದ್ರ ಸರಕಾರ ಕರಾಳ ಕೃಷಿ ಕಾಯ್ದೆಯನ್ನು ವಾಪಸ್ ಪಡೆದಿರುವುದು ಸ್ವಾಗತಾರ್ಹ ಎಂದು ಸಿಪಿಐ ಹಾಗೂ ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿಗು ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
ಈ ರೈತ ಚಳುವಳಿಯಲ್ಲಿ ಮಡಿದ ಎಲ್ಲ ಹುತಾತ್ಮರ ಕುಟುಂಬಕ್ಕೆ ಕೇಂದ್ರ ಸರಕಾರ ಸೂಕ್ತ ಪರಿಹಾರ ಮತ್ತು ಮಾಸಾಷನ ಕೊಡಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮತ್ತು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೇರಿಂಜ ಒತ್ತಾಯಿಸಿದ್ದಾರೆ.