×
Ad

ಅರಿವು ಸಾಲ ಯೋಜನೆ; ಮರು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಜಿಐಒ ಪೋಸ್ಟ್ಕಾರ್ಡ್ ಅಭಿಯಾನ

Update: 2021-11-19 21:42 IST

ಮಂಗಳೂರು, ನ.19: ಅರಿವು ಸಾಲ ಯೋಜನೆಯನ್ನು ಪುನಃ ಅನುಷ್ಠಾನಗೊಳಿಸುವಂತೆ ಜಿಐಒ ದ.ಕ. ಜಿಲ್ಲಾ ಸಮಿತಿಯು ಪೋಸ್ಟ್ ಕಾರ್ಡ್ ಅಭಿಯಾನ ಆರಂಭಿಸಿದೆ.

ಈ ಬಗ್ಗೆ ರಾಜ್ಯ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿತ್ತು. ಅದರ ಪರಿಣಾಮ ಸರಕಾರ ಮಂಜೂರಾತಿಗೆ ಆದೇಶ ನೀಡಿತ್ತು. ಪ್ರಸ್ತುತ ಈ ಯೋಜನೆಯು ಎಲ್ಲಾ ಅರ್ಜಿದಾರರನ್ನು ಪರಿಗಣಿಸದೆ ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಸಾಲ ಪಡೆಯಲು ಅವಕಾಶ ನೀಡುತ್ತಿದೆ. ಈ ಕ್ರಮದಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಸಾಲ ಸೌಲಭ್ಯದಿಂದ ವಂಚಿತರಾಗುವ ಸಂಭಾವ್ಯಗಳಿವೆ. ಅಲ್ಲದೆ ಉನ್ನತ ಶಿಕ್ಷಣದ ಕನಸು ಭಗ್ನಗೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿರುವ ಜಿಐಒ, ಅರಿವು ಸಾಲ ಹಿಂದಿನಂತೆ ಮರು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಪೋಸ್ಟ್‌ಕಾರ್ಡ್ ಅಭಿಯಾನ ಆರಂಭಿಸಿದೆ.

ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಈ ಅಭಿಯಾನದಲ್ಲಿ ಕೈ ಜೋಡಿಸಿ ಸಹಕರಿಸುವಂತೆ ಜಿಐಓ ಮನವಿ ಮಾಡಿದೆ. ಕಾರ್ಡ್ ಬರೆದವರು ಸ್ಥಳೀಯ ಅಂಚೆ ಕಚೇರಿಗಳ ಮೂಲಕ ಕರ್ನಾಟಕದ ಮುಖ್ಯಮಂತಿಗೆ ಪೋಸ್ಟ್ ಮಾಡಬೇಕು. ಅದಕ್ಕೂ ಮುನ್ನ ಮೊಬೈಲ್‌ನಲ್ಲಿ ಪೋಸ್ಟ್ ಕಾರ್ಡ್‌ನ ಫೋಟೋ ತೆಗೆದು GIO DAKSHINA KANNADA Instagram ಮತ್ತು Facebook ಪೇಜ್‌ಗಳನ್ನು ಟ್ಯಾಗ್ ಮಾಡಿ ಅಪ್ಲೋಡ್ ಮಾಡಬೇಕು ಎಂದು ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News