×
Ad

ವಜ್ರದುಂಗುರ ಕಳವು

Update: 2021-11-19 22:44 IST

 ಉಡುಪಿ, ನ.19: ನಗರದ ಕರಾವಳಿ ಜಂಕ್ಷನ್‌ನ ಬಳಿ ಇರುವ ಮಣಿಪಾಲ್ ಇನ್ ಹೊಟೇಲ್‌ನಲ್ಲಿ ರೂಮು ಮಾಡಿಕೊಂಡು ಇದ್ದ ಮುಂಬೈ ಕಾಲಚೌಕಿ ಅಭ್ಯುದಯ ನಗರದ ಸ್ಟಾನ್ಲಿ ಇ.ಬಿ.ಪಾಲನ್ ಎಂಬವರು ತನ್ನ ರೂಮಿನಲ್ಲಿ ಬೈಬಲ್ ಪುಸ್ತಕದ ಮೇಲೆ ಇರಿಸಿದ್ದ 1.07 ಲಕ್ಷ ರೂ. ಮೌಲ್ಯದ ವಜ್ರದುಂಗುರ ಕಳವಾದ ಘಟನೆ ನ.8ರ ಅಪರಾಹ್ನ 2:30ರಿಂದ ರಾತ್ರಿ 9:30 ನಡುವಿನ ಅವಧಿಯಲ್ಲಿ ನಡೆದಿದೆ.

ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News