×
Ad

ಉಡುಪಿ: ವಶಪಡಿಸಿಕೊಂಡ ಅಕ್ಕಿ ಡಿ.4ಕ್ಕೆ ಬಹಿರಂಗ ಹರಾಜು

Update: 2021-11-20 19:21 IST

ಉಡುಪಿ, ನ.20: ಜಿಲ್ಲೆಯ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಕೋಟಾ ಠಾಣಾ ವ್ಯಾಪ್ತಿಯ ರೈಸ್‌ಮಿಲ್‌ಗೆ ದಾಳಿ ನಡೆಸಿ ವಶಪಡಿಸಿ ಕೊಂಡ ಒಟ್ಟು 681.50 ಕ್ವಿಂ ಅಕ್ಕಿಯನ್ನು ಡಿಸೆಂಬರ್ 4 ರಂದು ಅಪರಾಹ್ನ 12 ಗಂಟೆಗೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಆವರಣದಲ್ಲಿರುವ ಟಿಎಪಿಸಿಎಂಎಸ್ ದಾಸ್ತಾನು ಮಾಡಿರುವ ಗೋದಾಮಿನಲ್ಲಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಸಮಕ್ಷಮದಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News