ಮಿತ್ತಬೈಲ್ ಮಸೀದಿ ಅಧ್ಯಕ್ಷರಾಗಿ ಮುಹಮ್ಮದ್ ಸಾಗರ್ ಪುನರಾಯ್ಕೆ

Update: 2021-11-20 14:38 GMT

ಬಂಟ್ವಾಳ, ನ.20: ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಮುಹಮ್ಮದ್ ಅದ್ದೇಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ 2021-2022ನೇ ಸಾಲಿನ ಆಡಳಿತ ಕಮಿಟಿ ಬದಲಾವಣೆ ಮಾಡದೆ ಅದನ್ನೇ ಮುಂದುವರಿಸಲು ಜಮಾಅತ್ ಸದಸ್ಯರು ಸೂಚಿಸಿದ್ದು ಅದರಂತೆ ಅಧ್ಯಕ್ಷರಾಗಿ ಮುಹಮ್ಮದ್ ಸಾಗರ್ ಅವರು ಪುನಃರಾಯ್ಕೆಯಾದರು.

ಖತೀಬರಾದ ಕೆ.ವೈ.ಅಶ್ರಫ್ ಫೈಝಿ ಅವರು ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಮ್ ಅವರು ಕಳೆದ ಒಂದು ವರ್ಷಗಳ ಆಯವ್ಯಯದ ಲೆಕ್ಕಪತ್ರ ವನ್ನು ಮಂಡಿಸಿ ಅನುಮೋದನೆ ಪಡೆದರು.

ಸಭೆಯಲ್ಲಿ ಜಮಾತ್ ವ್ಯಾಪ್ತಿಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಜಮಾತ್ ಆಡಳಿತ ಕಚೇರಿ, ಖಾಝಿ ಭವನ, ಮಸೀದಿ ಮೇಲಂತಸ್ತು, ಮಯ್ಯತ್ ಪರಿಪಾಲನಾ ಕೊಠಡಿ ಈಗಾಗಲೇ ಉದ್ಘಾಟನೆಗೊಂಡ ಬಗ್ಗೆ ವರದಿ ನೀಡಲಾಯಿತು.

ಆಡಳಿತ ವ್ಯವಸ್ಥೆ ಕಂಪ್ಯೂಟರೀಕರಣ, ಜಮಾಅತ್ ಸದಸ್ಯರ ಆರ್ಥಿಕ ಸ್ಥಿತಿಗತಿ ಬಗ್ಗೆ ಸಮೀಕ್ಷೆ ಸಮೀಕ್ಷೆ, ಮಹಿಳಾ ಶರೀಅತ್ ಕಾಲೇಜು ಸ್ಥಾಪನೆ, ಫೆಬ್ರವರಿ ತಿಂಗಳಲ್ಲಿ ಉರೂಸ್ ಕಾರ್ಯಕ್ರಮ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಕಾರ್ಯದರ್ಶಿಗಳಾದ ಅಕ್ಬರ್ ಅಲಿ ಸ್ವಾಗತಿಸಿದರು. ಅಶ್ರಫ್ ಶಾಂತಿಅಂಗಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News