ಕರ್ಣಾಟಕ ಬ್ಯಾಂಕ್ ಗ್ರಾಮೀಣ ಜನರ ನಡುವೆ ಉತ್ತಮ ನಾಯಕತ್ವದಿಂದ ಎತ್ತರಕ್ಕೆ ಬೆಳೆದಿದೆ: ಡಾ.ಡಿ.ವೀರೇಂದ್ರ ಹೆಗ್ಗಡೆ
ಮಂಗಳೂರು : ಕರ್ಣಾಟಕ ಬ್ಯಾಂಕ್ ಗ್ರಾಮೀಣ ಜನರ ನಡುವೆ ಹಳ್ಳಿಯ ಬ್ಯಾಂಕ್ ಆಗಿ ಉತ್ತಮ ನಾಯಕತ್ವದಿಂದ ಎತ್ತರಕ್ಕೆ ಬೆಳೆದಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಅವರು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿಂದು ಹಮ್ಮಿಕೊಂಡ ಕರ್ಣಾಟಕ ಬ್ಯಾಂಕ್ ನ ನಿವೃತ್ತ ಅಧ್ಯಕ್ಷ ಪಿ.ಜಯರಾಮ ಭಟ್ ರವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕರ್ಣಾಟಕ ಬ್ಯಾಂಕ್ ಹಳ್ಳಿಯ ಜನರ ನಡುವೆ ಹುಟ್ಟಿ ಬೆಳೆದ ಕಾರಣ ಇಂದಿಗೂ ಸ್ಥಿರವಾದ ಬ್ಯಾಂಕ್ ಆಗಿ ಉಳಿದಿದೆ ಮತ್ತು ವಿಸ್ತಾರವಾ ಗಿದೆ. ಒಳ್ಳೆಯ ಸಂಕಲ್ಪ ಇದ್ದಾಗ ಒಳ್ಳೆಯ ಕೆಲಸ ಸಾಧ್ಯ. ಕಂಡ ಕನಸು ನನಸಾಗ ಬೇಕಾದರೆ ಹಾಕಿಕೊಂಡ ಗುರಿ ತಲುಪಬೇಕು ಅದು ಸಾಧನೆ.ಈ ಸಾಧನೆ ಜಯರಾ ಭಟ್ ರವರ ನಾಯಕತ್ವದಲ್ಲಿ ಕರ್ಣಾಟಕ ಬ್ಯಾಂಕ್ ನಲ್ಲಿ ನಡೆದಿದೆ. ಬ್ಯಾಂಕ್ ಬೆಳೆದಿದೆ ಅದನ್ನು ಕಂಡು ಸಂತೋಷ ವಾಗಿದೆ.ಬ್ಯಾಂಕ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹೆಗ್ಗಡೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದ ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎನ್. ವಿನಯ ಹೆಗ್ಡೆ ಮಾತನಾ ಡುತ್ತಾ, ಜಯರಾಮ ಭಟ್ ತಮ್ಮ ಶ್ರಮ ಜೀವನ, ಸರಳತೆ, ಕರ್ತವ್ಯ ನಿಷ್ಠೆ ಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾದರಿ ಯಾಗಿದ್ದ ವ್ಯಕ್ತಿಯಾಗಿದ್ದರು ಎಂದು ಅಭಿನಂದಿಸಿದರು.
ಸಮಿತಿಯ ಗೌರಾವಾಧ್ಯಕ್ಷ ಹಾಗೂ ಉದ್ಯಮಿ ಎ.ಜೆ. ಶೆಟ್ಟಿಯವರು ಜಯರಾಮ ಭಟ್ ರವರರ ಬಗ್ಗೆ ಮಾತನಾಡುತ್ತಾ,ಜಯ ರಾಮಭಟ್ ಕರ್ಣಾಟಕ ಬ್ಯಾಂಕ್ ನ ಶಕ್ತಿ ಯಾಗಿದ್ದರು ಎಂದು ಅಭಿನಂದನಾ ನುಡಿಗಳೊಂದಿಗೆ ಶುಭ ಹಾರೈಸಿದರು.
ಅಭಿನಂದನೆ ಸ್ವೀಕರಿಸಿದ ಪಿ.ಜಯರಾಮ ಭಟ್ ಮಾತನಾಡುತ್ತಾ, ಕರ್ಣಾಟಕ ಬ್ಯಾಂಕ್ ನಲ್ಲಿ ನಾನು 48 ವರ್ಷ 7 ತಿಂಗಳು ಸುದೀರ್ಘ ಸೇವೆ ತೃಪ್ತಿ ತಂದಿದೆ. ನನ್ನ ಅವಧಿಯಲ್ಲಿ ಸುಮಾರು 316 ಶಾಖೆ ಆರಂಭವಾಗಿದೆ. ಸಮಾಜಕ್ಕೆ ಸೇವೆ ಸಲ್ಲಿಸುವ ಅವಕಾಶವೂ ದೊರೆಯಿತು. ಬ್ಯಾಂಕ್ ಒಂದು ಸೇವಾ ಸಂಸ್ಥೆ ಯಾಗಿ ಗ್ರಾಹಕರ ಪ್ರೀತಿಗಳಿಸಲು ಸಾಧ್ಯವಾ ಯಿತು. ಅವರಿಗೆ ಸೇವೆ ನೀಡಲು ಸಾಧ್ಯವಾಗಿದೆ. ನಾನು ಸೇರಿದಾಗ 37 ಕೋಟಿ ವ್ಯವಹಾರ ಹೊಂದಿದ್ದ ಬ್ಯಾಂಕ್ ಈಗ ಒಂದು ಲಕ್ಷ 33 ಕೋಟಿ ರೂ ವ್ಯವಹಾರ ನಡೆಸುತ್ತಿದೆ. ಮುಂದೆ 2 ಲಕ್ಷ ಕೋಟಿ ರೂ ವ್ಯವಹಾರ ಮಾಡು ವಂತಾಗಲಿ ಎಂದು ತಮಗೆ ಅಭಿನಂದನೆ ಸಲ್ಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಕರ್ಣಾಟಕ ಬ್ಯಾಂಕ್ ನ ನೂತನ ಅಧ್ಯಕ್ಷ ಪಂಜ ಪ್ರದೀಪ್ ಕುಮಾರ್ ಮಾತನಾಡುತ್ತಾ, ಕರ್ಣಾಟಕ ಬ್ಯಾಂಕ್ ನ್ನು ಸಮರ್ಥವಾಗಿ ಸುದೀರ್ಘವಾಗಿ ನಡೆಸಿದ ಪಿ.ಜಯರಾಮ ಭಟ್ ಬ್ಯಾಂಕಿಂಗ್ ಕ್ಷೇತ್ರದ ಸಮರ್ಥ ನಾಯಕನಾಗಿದ್ದರು ಎಂದು ಅಭಿನಂದನೆ ಸಲ್ಲಿಸಿದರು.
ಕರ್ಣಾಟಕ ಬ್ಯಾಂಕ್ ಸಿಎಂಡಿ ಮಹಾಬ ಲೇಶ್ವರ ಎಂ.ಎಸ್ ಮಾತನಾಡುತ್ತಾ, ಕರ್ಣಾಟಕ ಬ್ಯಾಂಕನ್ನು ಸಮರ್ಥ ವಾಗಿ ಮುನ್ನಡೆಸಿ ತಮ್ಮ ವೃತ್ತಿಪರ ಅನುಭವ ದೊಂದಿಗೆ ಬ್ಯಾಂಕಿನ ಸರ್ವಾಂಗೀಣ ಬೆಳವಣಿಗೆಗೆ ನಿವೃತ್ತ ಅಧ್ಯಕ್ಷ ಜಯರಾಮ ಭಟ್ ಮಹತ್ವದ ಕೊಡುಗೆ ನೀಡಿದ್ದಾರೆ. ಮುಂದಾಲೋಚನೆಯೊಂದಿಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ .ಉತ್ತಮ ನೂತನ ಅಧ್ಯಕ್ಷರು ನೇಮಕಗೊಂಡಿದ್ದಾರೆ ಅವರ ನಾಯಕತ್ವದೊಂದಿಗೆ ಬ್ಯಾಂಕ್ ಮುಂದಿನ ಎರಡು ವರ್ಷ ಗಳಲ್ಲಿ ಶತಮಾನೋತ್ಸವ ವನ್ನು ಯಶಸ್ವಿ ಯಾಗಿ ಆಚರಿಸುವಂತಾಗಲಿ ಎಂದು ಮಹಾಬ ಲೇಶ್ವರ ತಮ್ಮ ಅಧ್ಯಕ್ಷ ಭಾಷಣದಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಉದ್ಯಮಿ ನಾಡೋಜ ಜಿ.ಶಂಕರ್, ಪಿ.ಜಯ ರಾಮ ಭಟ್ ರವರ ಪತ್ನಿ ಶುಭ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ನ ನೂತನ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ ಅವರನ್ನು ಅಭಿನಂದಿಸಲಾಯಿತು. ಜಯ ರಾಮಾಭಿವಂದನಾ ಸಮಿತಿಯ ಸಂಘಟಕ ರಾದ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಮನೋಹರ ಪ್ರಸಾದ್ ಮತ್ತು ಸುಧಾಕ ರರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಜಯರಾಮಾಭಿನಂದನಾ ಸಮಿತಿಯ ಅಧ್ಯಕ್ಷ ರಘುನಾಥ ಸೋಮಯಾಜಿ ವಂದಿಸಿದರು.