×
Ad

ಕಾಂಚನ ಹೋಂಡಾ: ಹೋಂಡಾ ಬಿಗ್‍ವಿಂಗ್‍ನಲ್ಲಿ ಉಚಿತ ಟೆಸ್ಟ್ ರೈಡ್

Update: 2021-11-20 22:04 IST

ಮಂಗಳೂರು: ಮಂಗಳೂರಿನ ಹೋಂಡಾ ಬಿಗ್‍ವಿಂಗ್‍ನ ಏಕೈಕ ಡೀಲರ್ ಕಾಂಚನ ಹೋಂಡಾದ ಕೊಟ್ಟಾರ ಚೌಕಿಯಲ್ಲಿರುವ ಹೋಂಡಾ ಬಿಗ್‍ವಿಂಗ್ ಶೋ ರೂಂನಲ್ಲಿ ಮುಂಚೂಣಿಯ ಹೋಂಡಾ ಪ್ರೀಮಿಯಂ ಬೈಕ್‍ಗಳ ಉಚಿತ ಟೆಸ್ಟ್ ರೈಡ್‍ಗೆ ನ. 21ರಂದು ಅವಕಾಶ ಕಲ್ಪಿಸಿದೆ.

ಹೈ ನೆಸ್ಸ್ ಸಿಬಿ 350, ಸಿಬಿ 350 ಆರ್ ಎಸ್, ಸಿಬಿ 500 ಎಕ್ಸ್, ಆಫ್ರಿಕಾ ಟ್ವಿನ್ ಮತ್ತು ಸಿಬಿ 650 ಆರ್ ಬೈಕ್‍ಗಳನ್ನು ಉಚಿತವಾಗಿ ಟೆಸ್ಟ್ ರೈಡ್ ಮಾಡುವ ಮೂಲಕ ಪ್ರೀಮಿಯಂ ಬೈಕ್ ಚಾಲನೆಯ ವಿಶೇಷ ಅನುಭವ ಪಡೆಯಬಹುದಾಗಿದೆ. ಆಸಕ್ತರು 8147599845ಗೆ ಕರೆ ಮಾಡಿ ಮುಂಗಡ ಬುಕಿಂಗ್ ಮಾಡಬಹುದು.

ಅತಿ ಕಡಿಮೆ ಬಡ್ಡಿದರದಲ್ಲಿ ಹಣಕಾಸು: ಹೋಂಡಾ ಬಿಗ್‍ವಿಂಗ್ ಶೋಂ ರೂಂನಿಂದ ಬೈಕ್ ಖರೀದಿದಾರರಿಗೆ ವಿಶೇಷವಾಗಿ ಹಣಕಾಸು ವ್ಯವಸ್ಥೆಯನ್ನು ಅತಿ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ವಿಳಂಬವಿಲ್ಲದೆ ಒದಗಿಸಲಾಗುತ್ತಿದೆ. ಶೇ.100ರಷ್ಟು ಫಂಡಿಂಗ್, 5.65% ಬಡ್ಡಿ ದರ, 60 ಸುಲಭ ಕಂತುಗಳಲ್ಲಿ ಪಾವತಿ, ತಕ್ಷಣ ಮಂಜೂರಾತಿ ವ್ಯವಸ್ಥೆ ಇಲ್ಲಿದೆ.

ಹೋಂಡಾ ಬಿಗ್‍ವಿಂಗ್ ಮಂಗಳೂರಿನ ರಿಟೈಲ್ ಶೋ ರೂಂ ಆಗಿದ್ದು, ಹೋಂಡಾದ 350 ಸಿಸಿಯಿಂದ 500 ಸಿಸಿ ತನಕ ಬೈಕ್‍ಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ಕೊಟ್ಟಾರ ಚೌಕಿಯ ವಿ.ಎಸ್.ಕೆ. ಟವರ್‍ನಲ್ಲಿ ಶೋ ರೂಂ ಕಾರ್ಯಾಚರಿಸುತ್ತಿದೆ. ಹೋಂಡಾ ಬಿಗ್‍ವಿಂಗ್ ಸಾವಿರಾರು ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಶೋರೂಂಗೆ ಬರುವ ಎಲ್ಲ ಗ್ರಾಹಕರಿಗೆ ಇಲ್ಲಿನ ನುರಿತ ಸೇಲ್ಸ್ ಹಾಗು ಕಚೇರಿ ಸಿಬ್ಬಂದಿ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಹೋಂಡಾ ಬಿಗ್‍ವಿಂಗ್‍ನ ವಿವಿಧ ಬಗೆಯ ವಿನ್ಯಾಸದ ಬೈಕ್‍ ಗಳಿಂದ ಗ್ರಾಹಕರು ಹೆಚ್ಚು ಸಂತುಷ್ಟರಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News