ಜಪಾನ್ ಸಾಗರ ಪ್ರದೇಶ ಪ್ರವೇಶಿಸಿದ ಚೀನಿ ನೌಕಾಪಡೆಯ ಹಡಗು

Update: 2021-11-20 17:42 GMT
ಸಾಂದರ್ಭಿಕ ಚಿತ್ರ:PTI

ಟೋಕಿಯೊ,ನ.20: ಚೀನಿ ನೌಕಾಪಡೆಯ ಹಡಗೊಂದು ಈ ವಾರದ ಆರಂಭದಲ್ಲಿ ತನ್ನ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿರುವುದಾಗಿ ಜಪಾನ್ ಶನಿವಾರ ಆತಂಕ ವ್ಯಕ್ತಪಡಿಸಿದೆ.

ಬುಧವಾರದಂದು ಜಪಾನ್‌ನ ಆಗ್ನೇಯ ಭಾಗದ ಪ್ರಾಂತವಾದ ಕಾಗೊಶಿಮಾದ ಸಾಗರ ಪ್ರದೇಶದಲ್ಲಿ ಚೀನಾದ ಸರ್ವೇಕ್ಷಣಾ ಹಡಗೊಂದು ಸಂಚರಿಸುತ್ತಿದ್ದುದು ಕಂಡುಬಂದಿದೆಯೆಂದು ಕ್ಯೊಡೋ ನ್ಯೂಸ್ ವರದಿ ಮಾಡಿದೆ. ಬುಧವಾರ ರಾತ್ರಿ 8:40ರ ವೇಳೆಗೆ ಯಾಕುಶಿಮಾ ದ್ವೀಪದ ದಕ್ಷಿಣದಲ್ಲಿರುವ ವಿವಾದಿತ ವಲಯದಿಂದ ಜಪಾನ್‌ನ ಜಲಪ್ರದೇಶದತ್ತ ಚೀನಾದ ನೌಕೆಯು ಸಾಗುತ್ತಿರುವುದನ್ನು ಜಪಾನ್‌ನ ನೌಕಾ ಪಡೆಯ ಗಸ್ತು ವಿಮಾನ ಪತ್ತೆ ಹಚ್ಚಿತ್ತು.

ಚೀನಿ ನೌಕೆಯು ತನ್ನ ಜಲಪ್ರದೇಶದಲ್ಲಿ ಸಂಚರಿಸಿರುವ ಬಗ್ಗೆ ಜಪಾನ್ ಸರಕಾರವು ಚೀನಾಗೆ ತನ್ನ ಆತಂಕವನ್ನು ವ್ಯಕ್ತಪಡಿಸಿರುವುದಾಗಿ ಕ್ಯೊಡೋ ನ್ಯೂಸ್ ವರದಿ ಮಾಡಿದೆ. ತೀರಾ ಇತ್ತೀಚೆಗೆ ಚೀನಾವು ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ನೌಕಾಚಟುವಟಿಕೆಗಳನ್ನು ಚುರುಕುಗೊಳಿಸಿದೆ.. ಶುಕ್ರವಾರದಂದು ಚೀನಾದ ತಟರಕ್ಷಣಾ ದಳಕ್ಕೆ ಸೇರಿದ ನಾಲ್ಕು ಹಡಗುಗಳು ಸೆನ್‌ಕಾಕಸ್ ಸುತ್ತಮುತ್ತಲಿರುವ ಜಪಾನಿ ಜಲಪ್ರದೇಶವನ್ನು ಪ್ರವೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News