ತೈವಾನ್ ನ ಸ್ವಾತಂತ್ರ್ಯವನ್ನು ಚೀನಾ ಸಹಿಸಲಾರದು: ಅಮೆರಿಕದಿಂದ ತೈವಾನ್ ಗೆ ಯುದ್ಧ ವಿಮಾನಗಳ ಪೂರೈಕೆಗೆ ಬೀಜಿಂಗ್ ಆಕ್ರೋಶ

Update: 2021-11-20 17:48 GMT
ಎಫ್-16 photo:PTI

ಬೀಜಿಂಗ್,ನ.20: ತೈವಾನ್ ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನಗಳನ್ನು ತನ್ನ ವಾಯುಪಡೆಗೆ ಇತ್ತೀಚೆಗೆ ಸೇರ್ಪಡೆಗೊಳಿಸಿರುವಂತೆಯೇ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಇಂದಿಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತೈವಾನ್‌ನ ಸ್ವಾತಂತ್ರವನ್ನು ಬೀಜಿಂಗ್ ಸಹಿಸುವುದಿಲ್ಲ ಹಾಗೂ ಪ್ರತ್ಯೇಕವಾದದ ವಿರುದ್ಧ ಅದು ಕಠಿಣ ಕ್ರಮಗಳನು ಕೈಗೊಳ್ಳಲಿದೆಯೆಂದು ಹೇಳಿದ್ದಾರೆ. ಚೀನಾದ ವಿರುದ್ಧ ‘ತೈವಾನ್ ಕಾರ್ಡ್’ ಬಳಸುವುದನ್ನು ನಿಲ್ಲಿಸುವಂತೆಯೂ ಅವರು ಇತರ ದೇಶಗಳನ್ನು ಆಗ್ರಹಿಸಿದ್ದಾರೆ.

‘ಅಮೆರಿಕದ ಜೊತೆಗಿನ ಚೀನಾದ ಪ್ರಸಕ್ತ ವಾಣಿಜ್ಯ ಬಾಂಧವ್ಯಗ ಬಗ್ಗೆ ಪ್ರಸ್ತಾವಿಸಿದ ಅವರು ವಾಣಿಜ್ಯ ಸಂರಕ್ಷಣಾವಾದ ಅಥವಾ ಏಕಾಂಗಿಯಾಗಿಸುವಿಕೆಯು ಉಭಯದೇಶಗಳಿಗೆ ಹಾನಿಕರವಾಗಿದೆ. ಏಕತೆಯು ಮಾತ್ರವೇ ಭರವಸೆಯನ್ನು ತಂದುಕೊಡಲಿದೆ’ ಎಂಬ ವಾಂಗ್ ಹೇಳಿಕೆಯನ್ನು ಉಲ್ಲೇಖಿಸಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಆದಾಗ್ಯೂ ತನ್ನ ದೇಶಕ್ಕೆ ಇತರ ರಾಷ್ಟ್ರಗಳೊಂದಿಗೆ ಸಂಘರ್ಷಕ್ಕಿಳಿಯುವ ಯಾವುದೇ ಉದ್ದೇಶವಿಲ್ಲವೆಂದು ವಿದೇಶಾಂಗ ಸಚಿವರು ಸ್ಪಷ್ಟಪಡಿಸಿದ್ದಾರೆಂದು ಪತ್ರಿಕೆಯ ವರದಿ ತಿಳಿಸಿದೆ.

ಅಮೆರಿಕದ ಸುಧಾರಿತ ಎಫ್-16ವಿ ಫೈಟರ್‌ಜೆಟ್‌ಗಳನ್ನು ತೈವಾನ್ ವಾಯುಪಡೆಯಲ್ಲಿ ಕಳೆದ ವಾರ ನಿಯೋಜಿಸಿತ್ತು. ಈ ಯುದ್ಧ ವಿಮಾನಗಳು ತೈವಾನ್-ಅಮೆರಿಕ ಪಾಲುದಾರಿಕೆಯು ಪ್ರಗತಿಯೆಡೆಗೆ ದಾಪುಗಾಲಿಡುತ್ತ್ತಿರುವುದನ್ನು ಪ್ರತಿನಿಧಿಸಿದೆ ಎಂದು ತೈವಾನ್ ಅಧ್ಯಕ್ಷೆ ತ್ಸಾಯ್ ಹೇಳಿದ್ದಾರೆ.

ಈ ಮಧ್ಯೆ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವ ಲಿಜಿಯಾನ್ ಅವರು ತೈವಾನ್‌ಗೆ ಅಮೆಕವು ಎಫ್16ವಿ ಯುದ್ಧವಿಮಾನಗಳನ್ನು ಪೂರೈಕೆ ಮಾಡಿರುವ ಅಮೆರಿಕದ ನಡೆಯನ್ನು ಖಂಡಿಸಿದ್ದಾರೆ. ಪ್ರತ್ಯೇಕವಾದಿ ಶಕ್ತಿಗಳಿಗೆ ತಪ್ಪು ಸಂಕೇತಗಳನ್ನು ನೀಡಬಾರದೆಂದು ಲಿಝಿಯಾನ್ ಅವರು ಅಮೆರಿಕವನ್ನು ಆಗ್ರಹಿಸಿದ್ದಾರೆ.

ಚೀನಾ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಹಲವಾರು ಚೀನಾದ ಯದ್ಧವಿಮಾನಗಳು ತೈವಾನ್‌ನ ವಾಯುರಕ್ಷಣಾ ವಲಯವನ್ನು ಪ್ರವೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News