×
Ad

ಮದುವೆ ಪ್ರಸ್ತಾವ ತಿರಸ್ಕರಿಸಿದ ವ್ಯಕ್ತಿಗೆ ಆ್ಯಸಿಡ್ ಎರಚಿದ ಎರಡು ಮಕ್ಕಳ ತಾಯಿ !

Update: 2021-11-21 09:49 IST

ಇಡುಕ್ಕಿ : ತಾನು ಮುಂದಿಟ್ಟ ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ ಕಾರಣಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ ಎರಡು ಮಕ್ಕಳ ತಾಯಿಯಾದ 35 ವರ್ಷದ ಮಹಿಳೆ ಆ್ಯಸಿಡ್ ಎರಚಿದ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಮಹಿಳೆಯನ್ನು ಬಂಧಿಸಲಾಗಿದೆ. ಆ್ಯಸಿಡ್ ದಾಳಿಗೆ ಒಳಗಾದ ಅರುಣ್ ಕುಮಾರ್ (28) ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೆಂಬರ್ 16ರಂದು ಶೀಬಾ ಆ್ಯಸಿಡ್ ದಾಳಿ ನಡೆಸಿದ್ದು, ದಾಳಿಗೊಳಗಾದ ವ್ಯಕ್ತಿಯ ದೃಷ್ಟಿ ನಷ್ಟವಾಗುವ ಅಪಾಯ ಇದೆ ಎಂದು ಪೊಲೀಸರು ಹೇಳಿದ್ದಾರೆ.

"ಸಂತ್ರಸ್ತ ವ್ಯಕ್ತಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಅರುಣ್ ಹಾಗೂ ಶೀಬಾ ಫೇಸ್‌ಬುಕ್‌ನಲ್ಲಿ ಪರಸ್ಪರ ಪರಿಚಯವಾಗಿದ್ದು, ಮಹಿಳೆಗೆ ವಿವಾಹವಾಗಿ ಇಬ್ಬರು ಮಕ್ಕಳಿರುವುದು ಆ ಬಳಿಕ ಅರುಣ್‌ಗೆ ತಿಳಿದಿದೆ. ಸಂಬಂಧವನ್ನು ಕೊನೆಗೊಳಿಸಲು ಆತ ಬಯಸಿದ್ದ. ಆದರೆ ಮಹಿಳೆ ಆತನನ್ನು ಬ್ಲಾಕ್‌ಮೇಲ್ ಮಾಡಲು ಪ್ರಯತ್ನಿಸಿ ಹಣದ ಬೇಡಿಕೆ ಇಟ್ಟಿದ್ದಳು" ಎಂದು ಪೊಲೀಸರು ವಿವರಿಸಿದ್ದಾರೆ.

ಕುಮಾರ್ ತಮ್ಮ ಭಾವ ಹಾಗೂ ಸ್ನೇಹಿತನೊಂದಿಗೆ ನವೆಂಬರ್ 16ರಂದು ಆದಿಮಾಲಿ ಚರ್ಚ್‌ಗೆ ತೆರಳಿದ್ದರು. ಅಲ್ಲಿ ಆಕೆ ಹಣಕ್ಕಾಗಿ ಬೇಡಿಕೆ ಇಟ್ಟಳು ಎನ್ನಲಾಗಿದೆ. ಚರ್ಚ್‌ನಲ್ಲಿ ಕುಮಾರ್ ಅವರ ಹಿಂದಿದ್ದ ಮಹಿಳೆ ಮುಂದೆ ಬಂದು ಮುಖಕ್ಕೆ ಆ್ಯಸಿಡ್ ಎರಚಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆಗೂ ಸಣ್ಣಪುಟ್ಟ ಗಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News