×
Ad

ಇಮ್ರಾನ್ ಖಾನ್ ರನ್ನು 'ಅಣ್ಣ' ಎಂದ ನವಜ್ಯೋತ್ ಸಿಂಗ್ ಸಿಧು; ಸ್ವಪಕ್ಷೀಯರಿಂದಲೇ ಕೆಂಗಣ್ಣು

Update: 2021-11-21 10:15 IST

ಹೊಸದಿಲ್ಲಿ: ಶನಿವಾರ ಕರ್ತಾರ್‌ಪುರ ಕಾರಿಡಾರ್ ದಾಟಿದ ಬಳಿಕ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಡಾ ಭಾಯ್ (ಅಣ್ಣ) ಎಂದು ಕರೆಯುವ ಮೂಲಕ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜ್ಯೋತ್ ಸಿಂಗ್ ಸಿಧು, ಬಿಜೆಪಿ, ಎಎಪಿ ಹಾಗೂ ಅವರ ಪಕ್ಷದ ಮುಖಂಡರಿಂದಲೇ ಟೀಕೆಗಳಿಗೆ ಗುರಿಯಾಗಿದ್ದಾರೆ.

ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ತಮ್ಮ ಸಹೋದ್ಯೋಗಿ ಸಿಧು ಅವರನ್ನು ಟೀಕಿಸಿದ್ದು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಪಂಜಾಬ್‌ಗೆ ಮತ್ತು ಜಮ್ಮು ಕಾಶ್ಮೀರದ ಉಗ್ರರಿಗೆ ಡ್ರೋನ್ ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಕಳುಹಿಸುತ್ತಿರುವ ಪಾಕಿಸ್ತಾನದ ಸಾಧನವಾಗಿದ್ದಾರೆ ಎಂದು ಬಣ್ಣಿಸಿದ್ದಾರೆ. "ಪೂಂಚ್‌ನಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿರುವುದನ್ನು ನಾವು ಇಷ್ಟು ಬೇಗ ಮರೆಯಲು ಸಾಧ್ಯವೇ" ಎಂದು ಪ್ರಶ್ನಿಸಿದ್ದಾರೆ.

"ಸಿಧು ಮಾತನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಇಮ್ರಾನ್ ಅವರು ಭಾರತದಲ್ಲಿ ಯಾರಿಗೂ ಸಹೋದರ ಆಗಲು ಸಾಧ್ಯವಿಲ್ಲ" ಎಂದು ಪಕ್ಷದ ಮುಖಂಡ ರಶೀದ್ ಅಲ್ವಿ ಹೇಳಿದ್ದಾರೆ.

ಜಾಲತಾಣಗಳಲ್ಲೂ ಸಿಧು ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. "ಸಿಧು ಒಬ್ಬ ಜೋಕರ್. ಅವರಿಗೆ ಏಕೆ ಅಷ್ಟೊಂದು ಮಹತ್ವ ನೀಡಬೇಕು? ಇಲ್ಲಿ ಅವರೇನು ಮಾಡುತ್ತಿದ್ದಾರೆ? ತಮ್ಮ ಅಣ್ಣನೊಂದಿಗೆ ಪಾಕಿಸ್ತಾನದಲ್ಲೇ ನೆಲೆಸಬಹುದು" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News